ರಾಮಪ್ಪ ತಮ್ಮ ಅವಧಿಯ ಅಭಿವೃದ್ಧಿ ಶ್ವೇತಪತ್ರ ಹೊರಡಿಸಲಿ: ಶಿವಶಂಕರ್ ಸವಾಲು

ಶಿವಶಂಕರ್ ಸವಾಲು

ಹರಿಹರ: ಶಾಸಕ ಎಸ್.ರಾಮಪ್ಪ ಅವ ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸವಾಲು ಹಾಕಿದ್ದಾರೆ.
ನಗರದ ಜೆಡಿಎಸ್ ಕಚೇರಿ ಬಳಿ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದ ಅಂಗವಾಗಿ ಚುನಾವಣಾ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ, 5 ವರ್ಷ ಕಾಲಹರಣ ಮಾಡಿರುವ ಶಾಸಕ ಎಸ್. ರಾಮಪ್ಪ ಮತ್ತೆ ಸ್ಪರ್ಧೆಯ ಗುಂಗಿನಲ್ಲಿದ್ದಾರೆ. ಮೊದಲು ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ 2 ತಿಂಗಳ ಹಿಂದೆಯೆ ನನಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಶಾಸಕ ಎಸ್.ರಾಮಪ್ಪ ಮತ್ತು ಬಿಜೆಪಿಯ ಮಾಜಿ ಶಾಸಕ ಬಿ.ಪಿ.ಹರೀಶ್  ಟಿಕೆಟ್‌ಗಾಗಿ ಮುಖಂಡರ ಮನೆ, ಮನೆಗೆ ಅಲೆಯಬೇದ ವಾತಾವರಣ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಎಸ್.ರಾಮಪ್ಪ, ತಮ್ಮ ಹಿಂಬಾಲಕರಿಂದ ಕಡಿಮೆ ದರದಲ್ಲಿ ನಿವೇಶನ ಕೊಡಿಸುತ್ತೇನೆ, ಗೆದ್ದ ನಂತರ ಮನೆ ಕಟ್ಟಿಸಿ ಕೊಡುತ್ತೇನೆ ಎಂದು ನೂರಾರು ಜನರಿಂದ ಲಕ್ಷಾಂತರ ಹಣ ಪಡೆದಿದ್ದರು. ಇದುವರೆಗೂ ನಿವೇಶನವನ್ನೂ ನೀಡಿಲ್ಲ, ಜೋರು ಮಾಡಿದವರಿಗೆ ಅವರು ಕಟ್ಟಿದ ಅಸಲು ಹಣ ವಾಪಾಸ್ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮುಖಂಡರಾದ ಹಬೀಬ್ ಉಲ್ಲಾ ಗನ್ನೇವಾಲೆ, ಎ.ವಾಮನ ಮೂರ್ತಿ, ಎಂ.ಜಂಬಣ್ಣ, ಆರ್.ಸಿ.ಜಾವೀದ್, ಬಿ.ಅಲ್ತಾಫ್, ಹಳ್ಳಿಹಾಳ್ ಪರಮೇಶ್ವರಪ್ಪ, ಪ್ರೇಮಕುಮಾರ್ ಅಡಿಕಿ, ಮದ್ದಿ ಮನ್ಸೂರ್, ಫೈನಾನ್ಸ್ ಮಂಜುನಾಥ್, ಮೋಹನ್ ದುರ್ಗೋಜಿ, ರಾಜಣ್ಣ, ಜಾಕಿರ್, ರಮೇಶ್ ಬಿ., ನಾಗರಾಜ್ ನವಲೆ, ಮಾರುತಿ ಬೇಡರ್, ಮುಜಾಮ್ಮಿಲ್ ಸಾಬ್ ಇದ್ದರು.

Leave a Reply

Your email address will not be published. Required fields are marked *

error: Content is protected !!