ವಿದ್ಯಾನಗದಲ್ಲಿ ರಸ್ತೆ ಪಕ್ಕ ಕಸ ಎಸೆದವರಿಗೆ 400 ರೂ. ದಂಡ, ರಸ್ತೆ ಸ್ವಚ್ಛಗೊಳಿಸುವ ಶಿಕ್ಷೆ
ದಾವಣಗೆರೆ: ರಸ್ತೆಯ ಪಕ್ಕದಲ್ಲಿ ಕಸ ಹಾಕುವವರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ಹಾಗೂ ರಸ್ತೆ ಸ್ವಚ್ಛ ಮಾಡಿಸುವ ಕೆಲಸ ನೀಡಿ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿನ ವಿದ್ಯಾನಗರದ ರಿಂಗ್ ರಸ್ತೆಯ ಪಕ್ಕದಲ್ಲಿ ಕೆಲವುರ ನಿತ್ಯವೂ ಘನ ತ್ಯಾಜ್ಯ ಮತ್ತು ಕಸ ಎಸೆದು ನಗರದ ಸೌಂದರ್ಯ ಹಾಳು ಮಾಡುತ್ತಿರವ ಕೆಲಸಕ್ಕೆ ಸಾರ್ವಜನಿಕರ ಜೊತೆಗೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳೂ ಬೇಸತ್ತಿದ್ದರು.
ಶನಿವಾರ ಬೆಳಿಗ್ಗೆ ಗಸ್ತಿನಲ್ಲಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಘನ ತ್ಯಾಜ್ಯ ಹಾಗೂ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದಿದ್ದು, ಆತನಿಗೆ 400 ರೂ. ದಂಡ ವಿಧಿಸಿದ್ದಾರೆ. ಎಸೆದ ಕಸವನ್ನು ಅವನಿಂದಲೇ ಎತ್ತಿಸಿದ್ದಲ್ಲದೇ, 100 ಮೀಟಲರ್ ಉದ್ದದ ರಸ್ತೆಯ ಪಕ್ಕದಲ್ಲಿನ ಕಸವನ್ನೂ ಸ್ವಚ್ಛಗೊಳಿಸುವ ಕೆಲಸ ನೀಡುವ ಮೂಲಕ ರಸ್ತೆಗೆ ಕಸ ಎಸೆಯುವವರಿಗೆ ಎಚ್ಚರಿಕೆ ಮುಟ್ಟಿಸುವ ಕೆಲಸ ಮಾಡಿದ್ದಾರೆ.