172 ಮಕ್ಕಳು ಸೇರಿದಂತೆ 467 ಮಂದಿಗೆ ಕೊರೊನಾ ಸೊಂಕು ದೃಡ.! 289 ಮಂದಿ ಗುಣಮುಖ.

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜ. 24 ರಂದು 0 ಇಂದ 5 ವರ್ಷದೊಳಗಿನ 5 ಮಕ್ಕಳು, ಹಾಗೂ 5 ರಿಂದ 18 ವರ್ಷದೊಳಗಿನ 167 ಮಕ್ಕಳು, ಸೇರಿದಂತೆ, 835 ಮಕ್ಕಳಿಗೆ ಸೋಂಕು ಕೊರೊನಾ ಸೊಂಕು ಪತ್ತೆಯಾಗಿದೆ.

ನಿನ್ನೆ ಭಾನುವಾರ 465 ಮಂದಿಗೆ‌ ಕೊರೊನಾ ದೃಡಪಟ್ಟಿತ್ತು ಇಂದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,983 ಕ್ಕೇರಿದೆ.

ದಾವಣಗೆರೆ 208. ಹರಿಹರ 38, ಜಗಳೂರು ತಾಲೂಕಿನಲ್ಲಿ 60, ಚನ್ನಗಿರಿ ತಾಲ್ಲೂಕಿನಲ್ಲಿ 52, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 98 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 11 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ 54,378 ಮಂದಿಗೆ ಇಲ್ಲಿವರೆಗೆ ಕೊರೊನಾ ಸೊಂಕು ತಗುಲಿದೆ. 51,786 ಮಂದಿ ಗುಣಮುಖರಾಗಿದ್ದಾರೆ. 609 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!