ಜಿಲ್ಲೆಯಲ್ಲಿ ಆನ್ಲೈನ್ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸೋಣ – ಎಚ್. ಬಿ.ಮಂಜಪ್ಪ.

ದಾವಣಗೆರೆ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ಅನಿತಾ ಬಾಯಿ ಮಾಲ್ತೇಶ್ ಅಧ್ಯಕ್ಷತೆಯಲ್ಲಿ ನಡೆಸಲಾದ ಪಕ್ಷದ ಆನ್ಲೈನ್ ಸದಸ್ಯತ್ವ ಅಭಿಯಾನದ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪಕ್ಷ ಮಹತ್ವಾಕಾಂಕ್ಷೆಯಿಂದ ಚಾಲನೆ ನೀಡಿರುವ ಆನ್ಲೈನ್ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಜಿಲ್ಲೆಯ ಮುಖಂಡರಾದ ಡಾ. ಶಾಮನೂರು ಶಿವಶಂಕರಪ್ಪ ನವರ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ ಮಾತನಾಡಿ ಆನ್ಲೈನ್ ಸದಸ್ಯತ್ವ ನೋಂದಣಿ ಮಾಹಿತಿಯನ್ನು ಮಹಿಳಾ ಘಟಕದ ಪದಾಧಿಕಾರಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಜಿಲ್ಲಾ ವಕ್ತಾರರಾದ ಎಂ. ನಾಗೇಂದ್ರಪ್ಪ, ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಹುಲ್ಮನಿ ಗಣೇಶ್, ಮಹಿಳಾ ಕಾಂಗ್ರೆಸ್ ನ ಸ್ಮಿತಾ ಪಾಟೀಲ್, ಆಶಾ ಮುರುಳಿ, ರಾಜೇಶ್ವರಿ, ಶುಭಮಂಗಳ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!