88 ವರ್ಷದ ವೃದ್ಧನಿಗೆ 5 ಕೋಟಿ ರೂ.ಬಹುಮಾನ.! 40 ವರ್ಷದಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ವೃದ್ಧ

ಚಂಡೀಗಢ: ಮಕರ ಸಂಕ್ರಾಂತಿಯ ದಿನ 88 ವರ್ಷದ ವೃದ್ಧ ಮಹಾಂತ್ ದ್ವಾರಕ ದಾಸ್ ಅವರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದು, 5 ಕೋಟಿ ರೂ. ಬಹುಮಾನ ಸಿಕ್ಕಿದೆ.
ಪಂಜಾಬ್‌ನ ಇವರು ಕಳೆದ 35-40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುದ್ದರು. ಜನವರಿ 16ರಂದು, ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶದಲ್ಲಿ ಅವರಿಗೆ 5 ಕೋಟಿ ರೂ. ದೊರೆತಿದೆ.
30ರಷ್ಟು ತೆರಿಗೆ ಕಡಿತದ ಬಳಿಕ ಅವರಿಗೆ ಹಣ ನೀಡಲಾಗುತ್ತದೆ ಎಂದು ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.
ನನಗೆ ಸಂತೋಷವಾಗುತ್ತಿದೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ನಾನು ಗೆದ್ದ ಹಣವನ್ನು ನನ್ನ ಇಬ್ಬರೂ ಗಂಡುಮಕ್ಕಳಿಗೆ ಮತ್ತು ನನ್ನ ‘ಡೇರಾ’ಗೆ ನೀಡುತ್ತೇನೆ’ ಎಂದು ಮಹಾಂತ್ ದ್ವಾರಕ ದಾಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!