ಶಾಲಾ ಮಾನ್ಯತೆ ನವೀಕರಣ ಅವಧಿ 25ರವರೆಗೆ ವಿಸ್ತರಣೆ
ಬೆಂಗಳೂರು: ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆಯ ನವೀಕರಣದ ಅವಧಿ ಕಳೆದ ನವೆಂಬರ್‌ನಲ್ಲೇ ಮುಕ್ತಾಯವಾಗಿತ್ತು. ಆದರೆ ಶಿಕ್ಷಣ ಇಲಾಖೆ ಮತ್ತೆ ಜ.25ರವರೆಗೆ ವಿಸ್ತರಿಸಿದೆ.
ಶಾಲೆಗಳ ಮಾನ್ಯತೆ ನವೀಕರಣದ ಅವಧಿ 2022– 23ನೇ ಶೈಕ್ಷಣಿಕ ಅವಧಿಗೆ ಮಾನ್ಯತೆ ಮುಕ್ತಾಯವಾಗುವ ಶಾಲೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದಿದ್ದರೆ, ಅವುಗಳನ್ನು ಅನಧಿಕೃತ ಶಾಲೆಗಳೆಂದು ಪರಿಗಣಿಸಲಾಗುವುದು. ಮಾನ್ಯತೆ ನವೀಕರಣ ಮಾಡದ ಶಾಲೆಗಳ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೂರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೊನೆಯ ಅವಕಾಶ ನೀಡಲಾಗುತ್ತಿದೆ. ಈ ಬಾರಿಯೂ ಅವಕಾಶ ಬಳಸಿಕೊಳ್ಳದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ವಿಶಾಲ್ ಎಚ್ಚರಿಸಿದ್ದಾರೆ.