ಎಸ್ ಆರ್ ಎಸ್ ಕಾಲೇಜಿನಲ್ಲಿ “77 ನೇ ಸ್ವಾತಂತ್ರ‍್ಯ ದಿನಾಚರಣೆ”

ಚಿತ್ರದುರ್ಗ: ನಗರದ  ಎಸ್‌ ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 77 ನೇ ಸ್ವಾತಂತ್ರ‍್ಯ ದಿನಾಚರಣೆಯ ಕಾರ್ಯಕ್ರಮ  ಸಂಭ್ರಮದಿಂದ ನಡೆಯಿತು.ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಎಸ್‌ ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯಾಧಿಕಾರಿಗಳಾದ ಶ್ರೀಮತಿ  ಸುಜಾತ ಲಿಂಗಾರೆಡ್ಡಿ ಇವರು ಆಗಸ್ಟ್‌ 15 ಪ್ರತಿಯೊಬ್ಬ ಭಾರತೀಯನ ಸಂತೋಷದ ಸುದಿನ. ಏಕೆಂದರೆ ನಾವು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತವಾಗದೆ ಹೋಗಿದ್ದರೆ ಸ್ವತಂತ್ರದ ಜೀವನವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸ್ವಾತಂತ್ರ‍್ಯ ಹೋರಾಟದ  ಸಂಧರ್ಭದಲ್ಲಿ  ನಮ್ಮ ಹಿರಿಯರ ಹೋರಾಟ, ತ್ಯಾಗ, ಬಲಿದಾನಗಳ ಪ್ರತಿಫಲವಾಗಿ ನಮ್ಮ ದೇಶ ಸ್ವತಂತ್ರವಾಗಿದೆ. ಇದಕ್ಕೆ ಸಾಕ್ಷಿ ಇಂದು ನಾವೆಲ್ಲರೂ ಇಷ್ಟು ಸಂಭ್ರಮದಿಂದ ಬಂದಿರುವುದು.

ಮಕ್ಕಳೆ ನಿಮ್ಮನ್ನೆಲ್ಲ ನೋಡುತ್ತಿದ್ದರೆ ಒಬ್ಬೊಬ್ಬ ಸ್ವತಂತ್ರ‍್ಯ ಹೋರಾಟಗಾರರು ಕಣ್ಮುಂದೆ ಬರುತ್ತಾರೆ, ಆ ರೀತಿ ಕಾಣಿಸುತ್ತಿದ್ದೀರಿ. ಇಂದು ಧ್ವಜಾರೋಹಣ ಸಂಧರ್ಭದಲ್ಲಿ  ತುಂಬಾ ಶಿಸ್ತು, ಬದ್ದತೆಯಿಂದ ನಡೆಸಿಕೊಟ್ಟ ಪಥಸಂಚಲನವನ್ನು ನೋಡಿದಾಗ, ಹಿಂದೆ ಬ್ರಿಟೀಷರ ವಿರುದ್ಧವಾಗಿ ನಮ್ಮ ಸ್ವತಂತ್ರ‍್ಯ ಹೋರಾಟಗಾರರು ಇದೇ ರೀತಿ ವಿವಿಧ ಘೋಷಣೆಗಳೊಂದಿಗೆ ಚಳುವಳಿಗಳಲ್ಲಿ ಭಾಗವಹಿಸಿದ್ದು ನೆನಪಿಗೆ ಬರುತ್ತದೆ. ಭವಿಷ್ಯ ಇದನ್ನು ಗಮನದಲ್ಲಿಟ್ಟುಕೊಂಡು “ಮಕ್ಕಳು ಈ ದೇಶದ ಸಂಪತ್ತು” ಎಂದು ಗಾಂಧೀಜಿಯವರು ಹೇಳಿರಬಹುದೇನೊ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮೊಳಗೆ ಸಂಕಲ್ಪ ಮಾಡಿಕೊಳ್ಳೋಣ ಎಂದರು.

ಸ್ವತಂತ್ರ‍್ಯ – ಸುಭದ್ರ – ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ, ಸಹಬಾಳ್ವೆ, ಸಹಬಾಂಧವ್ಯ ನೆಲಸಿ ಈ ಭರತ ಭೂಮಿ ಶಾಶ್ವತವಾಗಿ ಪುಣ್ಯ ಭೂಮಿಯಾಗಿಯೇ  ಉಳಿಯಬೇಕು. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿ ಬುದುಕುತ್ತಿರುವ ನಾವುಗಳು ಪಾಪದ ಕಾರ್ಯಗಳನ್ನು  ಮಾಡದೆ ಪುಣ್ಯವಂತರಾಗಿ ಬದುಕೋಣ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಚಲನಚಿತ್ರ ನಟರು ಹಾಗೂ ಸಂಸ್ಕಾರ ಭಾರತೀಯ ಪ್ರಾಂತೀಯ ಅಧ್ಯಕ್ಷರು ಆಗಿರುವ ಶ್ರೀ ಸುಚೇಂದ್ರ ಪ್ರಸಾದ್  ಅವರು ಮಾತನಾಡಿ, ವೈಜ್ಞಾನಿಕವಾಗಿ ಮುಂದುವರಿದ ಜಗತ್ತಿನ ಯಾವ ರಾಷ್ತ್ರದಲ್ಲೂ ಭಾರತದೇಶದಂತಹ ವೈಭವವಿಲ್ಲ, ಚಿತ್ರದುರ್ಗ ಜಿಲ್ಲೆಯ ಇತಿಹಾಸ ಸ್ವಾತಂತ್ರ‍್ಯ ಭಾರತದ ಇತಿಹಾಸ ಪುಟಗಳಲ್ಲಿ ಅವಿಸ್ಮರಣಿಯ. ನಾವು ನಿಂತ ನೆಲ, ಕುಡಿದ ಜಲದ ಋಣವನ್ನು ಸದಾ ಸ್ಮರಿಸುತ್ತಿರಬೇಕು.ವಿದ್ಯಾರ್ಥಿಗಳು  ನಿತ್ಯ ಸತ್ಯದ ಜೊತೆಗೆ ಅನುಸಂಧಾನ ಮಾಡಿಕೊಳ್ಳಬೇಕು. ಸಾಧನೆ ಮಾಡಿದವರು ಸನ್ಮಾನಗಳಿಗೆ ಭಾಜನರಾಗುತ್ತಾರೆ, ಸಾಧ್ಯವಾಗದಿರುವವರು ವೇದನೆ ಪಡುತ್ತಾ ಜೀವನ ಕಳೆಯಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ನಿವೃತ್ತ ಯೋಧ ಶ್ರೀ ಹರಿನಾಥನ್‌ ಹಾಗೂ 2022 ರಲ್ಲಿ ಪ್ರಧಾನಮಂತ್ರಿ ಹಾಗೂ ರಾಷ್ಟ್ರಾಧ್ಯಕ್ಷರ ಸಮ್ಮುಖ ಗಣರಾಜ್ಯೋತ್ಸವದ ಪೇರೆಡ್‌ನ ಭಾರತೀಯ ತಂಡವನ್ನು ಮುನ್ನಡೆಸಲು ಲೆಪ್ಟ್ವಿಂಗ್ ಕಮಾಂಡರಾಗಿ ಕರ್ನಾಟಕದಿಂದ  ಆಯ್ಕೆಯಾದ ಎಸ್‌ ಆರ್‌ ಎಸ್‌ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿನಿ ಕುಮಾರಿ. ರಕ್ಷಿತಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಧ್ಯಾಕ್ಷರಾದ ಶ್ರೀ  ಬಿ .ಎಲ್‌. ಅಮೋಘ್‌ ಹಾಗೂ ಎಲ್ಲಾ ವಿಭಾಗಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!