Lokayukta; ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು: ಬೆಳ್ಳಂ ಬೆಳಿಗ್ಗೆ ರಾಜ್ಯದ ವಿವಿಧ ಜಿಲ್ಲೆಗಳ 18 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Raid) ನಡೆಸಿದ್ದು, ಭ್ರಷ್ಟರಿಗೆ ಶಾಕ್ ಕೊಟ್ಟಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಜಿಲ್ಲೆಗಳಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೆ. ಮಹೇಶ್ ಹಾಗೂ ಮಹೇಶ್ ಪತ್ನಿ ಬಿಬಿಎಂಪಿ (bbmp) ಎಇ ಭಾರತಿ, ಹೊಳಲ್ಕೆರೆ ಆರ್ ಎಫ್ ಓ ಸತೀಶ್ ಮನೆ ಕಚೇರಿಗಳಲ್ಲಿ ಲೋಕಾ ದಾಳಿ ನಡೆದಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಚಿತ್ರದುರ್ಗ ಲೋಕಾಯುಕ್ತ ಎಸ್ ಪಿ ವಾಸುದೇವರಾವ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾವಣಗೆರೆ ಹೊಳಲ್ಕೆರೆಯಲ್ಲಿ ದಾಳಿ ನಡೆಸಿದ್ದಾರೆ.ಇನ್ನು ದಾವಣಗೆರೆ (Davanagere) ಲೋಕಾಯುಕ್ತ ಎಸ್ ಪಿ ಕೌಲಾಂಪುರೆ, ಡಿವೈಎಸ್ಪಿ ನೇತೃತ್ವದ ತಂಡ ಚನ್ನಗಿರಿಯಲ್ಲಿ ದಾಳಿ ನಡೆಸಿದೆ.
Shakthi Yojane; ಗಾಳಿ ಸುದ್ದಿ ಗಾಳಿಲಿ ಬಿಟ್ಟು, ಶಕ್ತಿ ಯೋಜನೆ ಲಾಭ ಪಡೆಯಿರಿ – ಕೆ.ಎಲ್.ಹರೀಶ್ ಬಸಾಪುರ.
ಆರ್ ಎಫ್ ಓ ಕಚೇರಿಯಲ್ಲೂ ಅಧಿಕಾರಿಗಳ ಪರಿಶೀಲನೆ
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಆರ್ ಎಫ್ ಓ ಕಚೇರಿ ಹಾಗೂ ಚನ್ನಗಿರಿ ಆರ್ ಎಫ್ ಓ ಸತೀಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಮನೆ ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆರ್ ಎಫ್ ಓ ಸತೀಶ್ ಬೇರೆಕಡೆಗೆ ವರ್ಗಾವಣೆಯಾಗಿದ್ದರು. ಆದರೆ ಇನ್ನು ರಿಲೀವ್ ಆಗಿರಲಿಲ್ಲ, ಇಂದು ರಿಲೀವ್ ಆಗಬೇಕಿತ್ತು. ಅಷ್ಟರೊಳಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಸತೀಶ್ ಅವರಿಗೆ ಬಿಸಿ ಮುಟ್ಟಿಸಿದೆ.
ಶಿವಮೊಗ್ಗದಲ್ಲೂ ದಾಳಿ
ದಾವಣಗೆರೆ ಲೋಕಾಯುಕ್ತ ತಂಡವು ಶಿವಮೊಗ್ಗ ನಗರದ ಡಾಲರ್ಸ್ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ದಾವಣಗೆರೆಯ ಚನ್ನಗಿರಿ ಆರ್ಎಫ್ಒ ಸತೀಶ್ ಅವರ ವೃಷಭಾದ್ರಿ ಮನೆ ಮೇಲೆ ದಾಳಿ ನಡೆದಿದ್ದು, ಎರಡು ಜೀಪ್ ಗಳಲ್ಲಿ ಬಂದಿರುವ 7ಕ್ಕೂ ಅಧಿಕಾರಿ- ಸಿಬ್ಬಂದಿಗಳು ಬೆಳಗ್ಗಿನಿಂದಲೂ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.