ಲಂಚ ಕೇಳಿದ ಅಧಿಕಾರಿಗಳಿಗೆ ಎತ್ತು ತೆಗೆದುಕೊಳ್ಳಿ ಎಂದು ಬುದ್ದಿ ಕಲಿಸಿದ ರೈತ
![A farmer who taught the officers to take the ox when they asked for a bribe](https://garudavoice.com/wp-content/uploads/2023/03/farmer-taught-the-officers-14.jpg)
ಲಂಚ ಕೇಳಿದ ಅಧಿಕಾರಿಗಳಿಗೆ ಎತ್ತು ತೆಗೆದುಕೊಳ್ಳಿ ಎಂದು ಬುದ್ದಿ ಕಲಿಸಿದ ರೈತ
ಹಾವೇರಿ: ಸವಣೂರು ಪುರಸಭೆಯಲ್ಲಿ ಲಂಚ ಕೇಳಿದ ಅಧಿಕಾರಿಗೆ, ನನ್ನ ಬಳಿ 25 ಸಾವಿರ ಹಣವಿಲ್ಲ, ನನ್ನ ಎತ್ತು ತೆಗೆದುಕೊಳ್ಳಿ ಎಂದು ರೈತನೊಬ್ಬ ಅಸಹಾಯಕತೆ ತೋಡಿಕೊಂಡ ಘಟನೆ ಶುಕ್ರವಾರ ನಡೆದಿತ್ತು.
ಮನೆ ಖಾತೆ ಬದಲಾಯಿಸಲು 25 ಸಾವಿರ ಲಂಚ ಕೊಡುವಂತೆ ಅಧಿಕಾರಿಯೊಬ್ಬ ಬೇಡಿಕೆ ಇಟ್ಟಿದ್ದರು. ಎತ್ತು ಹಾಗೂ ಬಾರಕೋಲು ಸಮೇತ ಶುಕ್ರವಾರ ಪುರಸಭೆಗೆ ರೈತ ಯಲ್ಲಪ್ಪ ರಾಣೋಜಿ ಬಂದಿದ್ದರು.
ಈ ಹಿಂದೆ ಹಣ ಕೊಟ್ಟಿದ್ದೆ. ಹಣ ತೆಗೆದುಕೊಂಡವರು ವರ್ಗಾವಣೆಯಾಗಿದ್ದಾರೆ. ಈಗ ಹೊಸದಾಗಿ ಬಂದ ಅಧಿಕಾರಿಗಳು ಮತ್ತೆ 25 ಸಾವಿರ ರೂ. ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ” ಎಂದು ರೈತ ಯಲ್ಲಪ್ಪ ಅಳಲು ತೋಡಿಕೊಂಡರು.
ದುಡ್ಡು ಕೊಡುವ ತನಕ ಎತ್ತನ್ನು ನೀವೇ ಇಟ್ಟುಕೊಳ್ಳಿ ಎಂದು ಪುರಸಭೆ ಸಿಬ್ಬಂದಿಗೆ ರೈತ ಮನವಿ ಮಾಡಿದ್ದರು. ಯಲ್ಲಪ್ಪನ ನಡೆಗೆ ಪುರಸಭೆ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಸುತ್ತಮುತ್ತಲಿನ ಜನ ಸೇರಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಅಧಿಕಾರಿಗಳಿಗೆ ಸರಿಯಾಗಿ ಬುದ್ಧಿ ಕಲಿಸಿದ ಯಲ್ಲಪ್ಪನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.