ಮಲೆನಾಡಲ್ಲಿ ವಿಶೇಷ ಹಬ್ಬ; ಗಮನಸೆಳೆದ ಚಿಕ್ಕಮಗಳೂರು ಉತ್ಸವ

ಚಿಕ್ಕಮಗಳೂರು: ಇಂದಿನಿಂದ ಐದು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಉತ್ಸವ ನಡೆಯುತ್ತಿದೆ. ಈ ಉತ್ಸವದಲ್ಲಿ ಫಲಪುಷ್ಪ, ಕೃಷಿ, ತಂತ್ರಜ್ಞಾನ ಮತ್ತು ಆಕರ್ಷಕ ವಸ್ತು ಪ್ರದರ್ಶನದ ಸಂಗಮವಾದ ಚಿಕ್ಕಮಗಳೂರು ಜ್ಞಾನ ವೈಭವ ‌ಮೇಳ-2023ಕ್ಕೆ ಅದ್ಧೂರಿ ಚಾಲನೆ  ನೀಡಲಾಯಿತು.

ನಗರಾಭಿವೃದ್ಧಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಕೇಂದ್ರದ ರೈತರ ಕಲ್ಯಾಣ ರಾಜ್ಯ ಸಚಿವೆ. ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ತೋಟಗಾರಿಕೆ,ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಮುನಿರತ್ನ, ಚಲನಚಿತ್ರ ಕಲಾವಿದೆ ತಾರಾ ಅನುರಾಧ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ, ಜ್ಞಾನ ವೈಭವ ಮೇಳ ಕೂಡಾ ಗಮನಸೆಳೆಯಿತು. ಚಿಕ್ಕಮಗಳೂರು ಜಿಲ್ಲಾ ಉತ್ಸವ (ಚಿಕ್ಕಮಗಳೂರು ಹಬ್ಬ) ಅಂಗವಾಗಿ ‌ಕಡೂರು ತಾಲೂಕಿನ ‌ಸಖರಾಯಪಟ್ಟಣದ ಐಯ್ಯನಕೆರೆಯಲ್ಲಿ ಎರ್ಪಡಿಸಿರುವ ಸಾಹಸ ಜಲಕ್ರೀಡೆ ಏರ್ಪಡಿಸಲಾಗಿತ್ತು. ಸಚಿವ ಬಿ.ಎ.ಬಸವರಾಜ, ಶಾಸಕರಾದ ಸಿ.ಟಿ.ರವಿ, ‌ಸಚಿವ ಮುನಿರತ್ನ  ಜಲಕ್ರೀಡೆಯಲ್ಲಿ ಪಾಲ್ಗೊಂಡ ಯುವಜನರನ್ನು ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *

error: Content is protected !!