ಆವರಗೊಳ್ಳದಲ್ಲಿ ವಿಜೃಂಭಣೆಯ ರಥೋತ್ಸವ

ರಥೋತ್ಸವ

ದಾವಣಗೆರೆ; ದಾವಣಗೆರೆ ತಾಲ್ಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಬುಧವಾರ ಸಂಜೆ ಸಹಸ್ರಾರು ಸಂಖ್ಯೆಯ ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವಕ್ಕೂ ಮುನ್ನ ನಡೆದ ಝಂಡಾ ಹರಾಜಿನಲ್ಲಿ ಆವರಗೊಳ್ಳದ ಸತೀಶ್ ಬಾಬು ಎಂಬುವವರು 3,01,001 ರೂ.ಗಳಿಗೆ ಝಂಡಾ ಪಡೆದರು.
ನಂತರ ಶ್ರೀಬೀರೇಶ್ವರ ದೇವರು ರಥೋತ್ಸವದ ಪ್ರದಕ್ಷಿಣೆ ಹಾಕಿದಾಗ ರಥೋತ್ಸವ ಮುಂದೆ ಸಾಗಿತು. ಹರ ಹರ ಮಹದೇವಾ ಎಂಬ ಭಕ್ತರು ಹರ್ಷೋದ್ಘಾರ ಮುಗಿಲು ಮುಟ್ಟಿತು. ನಂತರ ಸರದಿ ಸಾಲಿನಲ್ಲಿ ನಿಂತು ಶ್ರೀ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದರು.

Leave a Reply

Your email address will not be published. Required fields are marked *

error: Content is protected !!