ಹೂವಿನಹಾರ ಬೇಡ ಮಗುವಿನ ಆರೋಗ್ಯ ಬೇಗ ಸುಧಾರಿಸಲಿ, ಮನೆ ದೇವರಿಗೆ ಹೂವಿನ ಹಾರ ಅರ್ಪಿಸಲು ಬಯಸಿದ ಡಾ. ಪ್ರಭಾ ಮಲ್ಲಿಕಾರ್ಜುನ್

ಆರೋಗ್ಯ

ದಾವಣಗೆರೆ: ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ವ್ಯಾಪ್ತಿಯ 25ನೇ ವಾರ್ಡ್ ನ ಡಿಸಿಎಂ ಟೌನ್ ಶಿಪ್ ನಲ್ಲಿ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ್ ರವರ ಬಳಿ ಬಂದ ಮಹಿಳೆ ಒಬ್ಬರು ತಮಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ ಇದ್ದು, ಮಗನ ಮಾನಸಿಕ ಹಾಗು ದೈಹಿಕ ಬೆಳವಣಿಗೆ ಇಲ್ಲದಿರುವುದರ ಬಗ್ಗೆ ಹಾಗೂ ಮಗು ಹುಟ್ಟಿದಾಗಲೇ ಆರೋಗ್ಯ ಸಮಸ್ಯೆ ಇದೆ ಹೆಚ್ಚಿನ ಚಿಕಿತ್ಸೆ ಬೇಕೆಂದು ವೈದ್ಯರು ಸೂಚಿಸಿದ್ದು ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಕೊಡಿಸಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಮಹಿಳೆಯ ಅಳಲನ್ನು ಆಲಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ವೈದ್ಯರಿಗೆ ಮಗುವಿನ ತಪಾಸಣೆ ನಡೆಸಿ ಅವಶ್ಯವಿರುವ ಚಿಕಿತ್ಸೆ ನೀಡಲು ಸೂಚಿಸಿದ್ದರು ಅದರಂತೆ ಎಸ್.ಎಸ್ ಹೈಟೆಕ್ ಹಾಸ್ಪಿಟಲ್ ನಲ್ಲಿ ಶಸ್ತ್ರಚಿಕಿತ್ಸೆ ನಡೆದು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಪೋಷಕರು ಇಂದು ತಮ್ಮ ಮಗುವಿನೊಂದಿಗೆ ಡಾ. ಪ್ರಭಾ ಮಲ್ಲಿಕಾರ್ಜುನ ರವರ ನಿವಾಸಕ್ಕೆ ಬಂದು ಧನ್ಯವಾದ ತಿಳಿಸಿ, ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರನ್ನು ಗೌರವಿಸಲು ದೊಡ್ಡ ಹೂವಿನಹಾರ ತಂದಿದ್ದರು, ಪೋಷಕರು ತಂದ ಹೂವಿನಹಾರ ಹಾಕಿಸಿಕೊಳ್ಳದೆ ಮಗುವಿನ ಆರೋಗ್ಯ ಬೇಗ ಸುಧಾರಿಸಲಿ ಎಂದು ಇಂದು ಸಂಜೆ ತಮ್ಮ ಮನೆ ದೇವರಿಗೆ ಅರ್ಪಿಸಲು ಬಯಸಿದ ಡಾ. ಪ್ರಭಾ ಮಲ್ಲಿಕಾರ್ಜುನ್.

Leave a Reply

Your email address will not be published. Required fields are marked *

error: Content is protected !!