ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 46 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಅಕ್ರಮವಾಗಿ ಪಡಿತರ ಅಕ್ಕಿಯನ್ನು ಹರಿಹರದಿಂದ ದಾವಣಗೆರೆ ಕಡೆಗೆ ಮಹೀಂದ್ರಾ ಬುಲೇರೋ ವಾಹನದಲ್ಲಿ ದಿನಾಂಕ-16.03.2024 ರಂದು ರಾತ್ರಿ ಸಮಯದಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಬಂದ ಮೇರೆಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರವರು ನೇತೃತ್ವದಲ್ಲಿ ಡಿ.ಸಿ.ಆರ್.ಬಿ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ದಾಳಿ ನಡೆಸಿದ ಘಟನೆ ದೊಡ್ಡಬಾತಿ ಗ್ರಾಮದಲ್ಲಿ ನಡೆದಿದೆ. ವಾಹನವನ್ನು ತಡೆದಾಗ ವಾಹನದ ಚಾಲಕ ಪೊಲೀಸರನ್ನು ನೋಡಿ ಓಡಿಹೋಗಿದ್ದಾನೆ.

ನಂತರ ವಾಹನವನ್ನು ಪರಿಶೀಲಿಸಿ ನೋಡಿದಾಗ ವಾಹನದಲ್ಲಿ ಆಹಾರ ಇಲಾಖೆಯಿಂದ ಸರಬರಾಜು ಆಗಿರುವ ಅಕ್ಕಿ ತುಂಬಿಕೊಂಡು ಹೋಗುತ್ತಿರುವುದು ಕಂಡುಬಂದಿದ್ದರಿಂದ ವಾಹನವನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಿದ್ದು, ಪೊಲೀಸ್ ಉಪನಿರೀಕ್ಷಕರು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸ್ ರವರು ಅಕ್ಕಿಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಆಹಾರ ನಿರೀಕ್ಷಕರು, ದಾವಣಗೆರೆ ರವರಿಗೆ ಮನವಿ ಪತ್ರ ಸಲ್ಲಿಸಿದ್ದು, ಅದರಂತೆ ನಿನ್ನೆ (ದಿನಾಂಕ: 19-03-2024) ಶ್ರೀ ನಾಗೇಂದ್ರ, ಜೆ ಆಹಾರ ನಿರೀಕ್ಷಕರು, ತಾಲ್ಲೂಕು ಕಛೇರಿ, ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ ರವರು ಠಾಣೆಗೆ ಬಂದು ಪರಿಶೀಲಿಸಿದಾಗ ಚೀಲಗಳ ಮೇಲೆ ಪುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಅಂತ ಲೇಬಲ್ ಇರುವ ಸುಮಾರು 46 ಕ್ವಿಂಟಾಲ್ 30 ಕೆ ಜಿ ಪಡಿತರ ಅಕ್ಕಿ ಇದ್ದು. ಸದರಿ ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ವಿತರಣೆ ಮಾಡುವ ಅಕ್ಕಿಯ ಹೋಲಿಕೆಯಂತೆ ಮೇಲ್ನೋಟಕ್ಕೆ ಕಂಡುಬಂದಿದೆ.

. ಆದ್ದರಿಂದ ಮೇಲ್ಕಂಡ ಕೆಎ-17-ಎಎ-5831 ನೇ ಮಹೀಂದ್ರಾ ಬುಲೇರೋ ವಾಹನದ ಚಾಲಕ ಹಾಗೂ ಮಾಲೀಕರ ಅಕ್ಕಿಯ ಸಾಗಾಟ ಮಾಡಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ- 1955 ರ ರೀತ್ಯಾ ಮುಂದಿನ ಕ್ರಮ ಕಾನೂನು ಕ್ರಮ ಕೈಗೊಳ್ಳಲು ಆಹಾರ ನಿರೀಕ್ಷಕರು, ತಾಲ್ಲೂಕು ಕಛೇರಿ, ದಾವಣಗೆರೆ ತಾಲ್ಲೂಕು ಇವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ. 88/2024, 3 & 7 ಇಸಿ ಆಕ್ಟ್ & 18 (ಪಿಡಿಎಸ್) ಪಿಸಿಓ ಆಕ್ಟ್ 2016 ರೀತ್ಯಾ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಮೇಲ್ಕಂಡ ದಾಳಿಯಲ್ಲಿ ಭಾಗವಹಿಸಿದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿರವರಾದ ಶ್ರೀ ಪ್ರಶಾಂತ್ ಸಿದ್ದನ ಗೌಡ್ರು ರವರು ಹಾಗು ಡಿಸಿಆರ್ ಬಿ ಸಿಬ್ಬಂದಿಗಳಾದ ಮಜೀದ್ ಕೆ.ಸಿ, ರಮೇಶ್ ನಾಯ್ಕ್, ರಾಘವೇಂದ್ರ, ಬಾಲಾಜಿ, ಆಂಜನೇಯ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪ್ರಶಂಸಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!