accident; ನಿಂತ ಲಾರಿಗೆ ಗುದ್ದಿದ ಕಾರು, ಸ್ಥಳದಲ್ಲೇ ನಾಲ್ವರ ದುರ್ಮರಣ

ಚಿತ್ರದುರ್ಗ, ಸೆ.04: ನಿಂತ ಲಾರಿಗೆ ಹಿಂಬದಿಯಿಂದ ಕಾರು ಗುದ್ದಿ ಅಪಘಾತ (accident) ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ನಾಲ್ಕು ಜನರು ಸಾವನ್ನಪ್ಪಿದ್ದ ಘಟನೆ ಚಿತ್ರದುರ್ಗ ನಗರದ ಹೊರವಲಯದ‌ ಮಲ್ಲಾಪುರ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಮಲ್ಲಿಕ್,ಕಲೀಲ್,ತಬ್ರೀಜ್ ಮತ್ತು ಶ್ಮುದ್ದೀನೀನ್ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನರ್ಗೀಸ್,ರೆಹಾನ್ ಮತ್ತು ರಹಾನ್ ಮೂವರನ್ನು ಚಿತ್ರದುರ್ಗದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

hc mahadevappa; ಮೋದಿ ಅವ್ರು ಎಮ್ಮೆ ಮೈ ಉಜ್ಜಿದ್ದಾರಾ..? ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನೆ

ಕಾರಿನಲ್ಲಿ‌ 7 ಜನರು ಪ್ರಯಾಣಿಸುತಿದ್ದು, ಮೃತರು ಹೊಸಪೇಟೆಯಿಂದ ತುಮಕೂರಿಗೆ ತೆರಳುತಿದ್ದರು ಎಂದು ತಿಳಿದು ಬಂದಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!