ರಾಜ್ಯ ಸುದ್ದಿ

hc mahadevappa; ಮೋದಿ ಅವ್ರು ಎಮ್ಮೆ ಮೈ ಉಜ್ಜಿದ್ದಾರಾ..? ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನೆ

ದಾವಣಗೆರೆ, ಸೆ.೦4: ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ..? ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ (hc mahadevappa) ಅವರು ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ದಾವಣಗೆರೆಯ ಬಾಪೂಜಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಫ್ರೀ ಯೋಜನೆಗಳಿಂದ ದೇಶ ದಿವಾಳಿಯಾಗುತ್ತೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ್ದು, ನಮ್ಮ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ಮುಟ್ಟುತ್ತಾ ಇದೆ. ಇದರಿಂದ ಅವರು ಆರ್ಥಿಕವಾಗಿ ಸಬಲೀಕರಣ ಆಗುತಿದ್ದಾರೆ. ಅವರೇನು ಎಮ್ಮೆ ಮೈ ಉಜ್ಜಿದ್ದಾರಾ..? ಸೆಗಣಿಸ ತೆಗೆದಿದೀರಾ..? ದನ ಮೇಯಿಸಿದ್ದಾರಾ..? ಇದೆಲ್ಲ ತೊಳಿದವರು ನಾವು, ಇವರೆಲ್ಲ ಸುಮ್ಮನೇ ಭಾವನಾತ್ಮಕವಾಗಿ ಮಾತನಾಡ್ತಾರೆ ಅಷ್ಟೆ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡಿ ಗೊತ್ತಿಲ್ಲ ಎಂದು ಹೇಳಿದರು.

Bhadra water; ಭದ್ರಾ ನೀರು ಹರಿಸಲು ಕರೆದಿರುವ ಐಸಿಸಿ ಸಭೆ ರದ್ದುಗೊಳಿಸಲು ಸಚಿವರಿಗೆ ಮನವಿ

ಉದಯ ನಿಧಿ ಸ್ಟಾಲಿನ್ ಸನಾತನಾ ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಎಚ್ ಸಿ ಮಹಾದೇವಪ್ಪ ಅವರು, ಸನಾತನ ಧರ್ಮ ಶುದ್ದೀಕರಣ ಆಗಬೇಕಿದೆ. ಸನಾತನದಲ್ಲಿ ಶೂದ್ರರರಿಗೆ ಓದೋದನ್ನ ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ವ್ಯಾಪಕ ವಿದ್ಯೆ ಕಲಿತರು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದತ್ತಾ ಇದ್ರೂ. ಓದಿದ್ರೇ ಕಾಯಿಸಿದ ಎಣ್ಣೆ ಬಿಡುತಿದ್ದರು ಇದನ್ನ ಯಾಕೆ ಮಾಡುತಿದ್ದರು? ಅದಕ್ಕೆ ಅಂಬೇಡ್ಕರ್ ಮನುವಾದವನ್ನ ಸುಟ್ಟು ಹಾಕಿದ್ರೂ. ಯಾವ ಧರ್ಮವು ಮೇಲಲ್ಲ ಎಲ್ಲವೂ ಸಂವಿಧಾನದ ಒಳಗೆ ಬರೋದು ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!