america; ದಾವಣಗೆರೆ ಮೂಲದ ಮೂವರ ಸಾವು ಪ್ರಕರಣ; ಅಮೆರಿಕಾದಲ್ಲೇ ಅಂತ್ಯಸಂಸ್ಕಾರ
ದಾವಣಗೆರೆ, ಆ.26: ಅಮೆರಿಕಾದಲ್ಲಿ (america) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ದಾವಣಗೆರೆ ಮೂಲದ ಮೂವರ ಅಂತ್ಯ ಸಂಸ್ಕಾರ ಇಂದು ಅಮೆರಿಕಾದಲ್ಲಿ ನೆರವೇರಿಸಲಾಗುವುದು. ಈ ಸಂಬಂಧ ಇಂದು ಘಟನಾ ಸ್ಥಳಕ್ಕೆ ಮೃತನ ತಾಯಿ ಸೇರಿ ನಾಲ್ವರು ಕುಟುಂಬ ಸದಸ್ಯರು ಅಮೆರಿಕಾಕ್ಕೆ ತೆರಳಲಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಯೋಗೇಶ್ ಹೊನ್ನಾಳ(37), ಪತ್ನಿ ಪ್ರತಿಭಾ ಹೊನ್ನಾಳ್(35), ಪುತ್ರ ಯಶ್ ಹೊನ್ನಾಳ್(6) ಮೃತಪಟ್ಟ ದುರ್ದೈವಿ ಟೆಕ್ಕಿಗಳು. ಘಟನೆ ಬೆಳಕಿಗೆ ಬಂದು ಎಂಟು ದಿನಗಳ ಬಳಿಕ ಮೃತ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಮೃತ ಯೋಗೇಶ್ ಪತ್ನಿ ಪ್ರತಿಭಾಳ ತಾಯಿ ಪ್ರೇಮಾ ಹಾಗೂ ಪ್ರತಿಭಾಳ ಸಹೋದರ ಗಣೇಶ ಇಂದು ಘಟನಾ ಸ್ಥಳಕ್ಕೆ ತಲುಪಲಿದ್ದಾರೆ.
Fire Death: ಅಮೆರಿಕಾದಿಂದ ಬಂದು ಒಂದೇ ದಿನಕ್ಕೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ತಾಯಿ ಮಗಳು.!
ಅಮೆರಿಕಾದ ಮೇರಿಲ್ಯಾಂಡ ರಾಜ್ಯದ ಬಾಲ್ಟಿಮೋರ್ ಗೆ ಹೋದ ಕುಟುಂಬಸ್ಥರು ಭಾರತೀಯ ಕಾಲಮಾನದಂತೆ ಇಂದು ಸಂಜೆ ಏಳು ಗಂಟೆಗೆ ಪಾರ್ಥಿವ ಶರೀರಗಳ ದರ್ಶನ ಪಡೆಯಲಿದ್ದಾರೆ. ಆಗಸ್ಟ್ 15ರಂದು ರಾತ್ರಿ ಪತ್ನಿ ಹಾಗೂ ಪುತ್ರನನ್ನ ಗುಂಡು ಹಾರಿಸಿ ಹತ್ಯೆ ಮಾಡಿ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಸ್ಟ್ 18ರಂದು ಪೊಲೀಸರ ಮಾಹಿತಿಯಿಂದ ಘಟನೆ ಬೆಳಕಿಗೆ ಬಂದಿದೆ. ಮೃತ ಯೋಗೇಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.
ಮೃತದೇಹಗಳು ಭಾರತಕ್ಕೆ ಕೊಂಡೊಯ್ಯುವ ಸ್ಥಿತಿಯಲ್ಲಿಲ್ಲ
ಕಳೆದ ಒಂದು ವಾರದಿಂದ ಅಲ್ಲಿಯೇ ಇದ್ದು ಶವ ಸ್ವದೇಶಕ್ಕೆ ತರುವ ಬಗ್ಗೆ ಯೋಗೇಶ್ ಸಂಬಂಧಿ ಸೋಮಶೇಖರ ಅವರು ಪ್ರಯತ್ನ ನಡೆಸಿದ್ದರು. ಅಲ್ಲದೇ ಈವರೆಗೂ ಅಲ್ಲಿನ ಪೊಲೀಸರು ಸೋಮಶೇಖರ ಅವರಿಗೂ ಶವ ತೋರಿಸಿಲ್ಲ. ಯೋಗೇಶ್ ಕುಟುಂಬ ಸಾವನ್ನಪ್ಪಿ ಇವತ್ತಿಗೆ 12 ದಿನಗಳಾಗಿದ್ದು, ಮೃತದೇಹಗಳು ಭಾರತಕ್ಕೆ ಕೊಂಡೊಯ್ಯುವ ಸ್ಥಿತಿಯಲ್ಲಿ ಇಲ್ಲ ಎನ್ನುವ ವರದಿಯನ್ನು ಬಾಲ್ಟಿಮೋರ್ ನ ಆರೋಗ್ಯ ಇಲಾಖೆ ನೀಡಿದೆ. ಹಾಗಾಗಿ ಮೃತದೇಹಗಳು ಭಾರತಕ್ಕೆ ರವಾನೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ಕುಟುಂಬಸ್ಥರು ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
vachana; ಮಾನವೀಯ ಮೌಲ್ಯಗಳು ಕಳಚಿ ಹೋಗ್ತಾ ಇದೆ: ಶಿವಾಚಾರ್ಯ ಸ್ವಾಮಿಗಳು
ಅಮೆರಿಕಾ ಕಾಲಮಾನ ಆಗಸ್ಟ್ 27 ರಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಮೆರಿಕಾದಲ್ಲಿರುವ ಒಂದು ಎಜೆನ್ಸಿ ಮುಖಾಂತರ ಅಮೇರಿಕಾ ಕಾಲಮಾನ ಸಾಯಂಕಾಲ 5 ಗಂಟೆ, ಭಾರತೀಯ ಕಾಲಮಾನ ಮುಂಜಾನೆ 4 ಗಂಟೆ ಸೂಮಾರಿಗೆ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಗೇಶ್ ಹಾಗೂ ಪ್ರತಿಭಾ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ