ಸಂಸತ್ ಭವನ ಹಾಗೂ ಸಾವರ್ಕರ್ ಜನ್ಮದಿನೊತ್ಸವ ಆಚರಣೆಗೆ ಸ್ವಾಗತಿಸಿದ ವಾನರ ಸೇನೆ

ಸಂಸತ್ ಭವನ ಹಾಗೂ ಸಾವರ್ಕರ್ ಜನ್ಮದಿನೊತ್ಸವ ಆಚರಣೆಗೆ ಸ್ವಾಗತಿಸಿದ ವಾನರ ಸೇನೆ

ದಾವಣಗೆರೆ: ನಮ್ಮ ಹೆಮ್ಮೆಯ ಪ್ರಧಾನಿಯವರು ಭಾರತದ ಅಭಿವೃಧ್ದಿಯ ವೇಗ, ಏಕತೆ ಮತ್ತು ಸಾರ್ವ ಭೌಮತ್ವವನ್ನು ಇಂದು ವಿಶ್ವಮಟ್ಟದಲ್ಲಿ ಸಾರಲು, ನೂತನವಾಗಿ ನಿರ್ಮಾಣವಾಗಿರುವ ಭವ್ಯವಾದ ಸಂಸತ್ ಭವನದ ಶಿಲಾನ್ಯಾಸ ಮತ್ತು ಉದ್ಘಾಟನೆಯ ಐತಿಹಾಸಿಕ ಸಂಧರ್ಭಕ್ಕೆ ದಿನಾಂಕವನ್ನು ನಿಗದಿ ಮಾಡಿದ್ದಾರೆ.

ಇದೆ ಮೇ ತಿಂಗಳ 28 ನೇ ತಾರೀಖು ಭಾನುವಾರದಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ರವರ ಜನ್ಮ ದಿನದಂದೇ ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಮಹತ್ವದ ನಿರ್ಣಯವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದ್ದು ನಮ್ಮೆಲ್ಲ ದೇಶ ಭಕ್ತ ಭಾರತೀಯರಿಗಿದು ಗರ್ವದ ವಿಷಯ.

ಈ ಐತಿಹಾಸಿಕ ಸಂಧರ್ಭವನ್ನು ಕಾಂಗ್ರೆಸ್ ಸೇರಿದಂತೆ 20 ವಿರೋಧ ಪಕ್ಷಗಳು ಬೈಕಾಟ್ ಮಾಡಿವೆ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ದೇಶದ ಆಂತರಿಕ ಒಡಕು ಎನ್ನುವ ಮಟ್ಟಿಗೆ ಜಾಗತಿಕವಾಗಿ ಪ್ರದರ್ಶನಕ್ಕಿಟ್ಟು ಬೆತ್ತಲಾಗಿದ್ದಾರೆ.

ಸಂವಿಧಾನದ ನೂತನ ದೇಗುಲ ಉದ್ಘಾಟನೆನ್ನು ಭಾರತವೇ ಸಂಭ್ರಮಿಸಬೇಕಾದ ಈ ಶುಭ ಸಂದರ್ಭದಲ್ಲಿ ವಿರೋಧ ಪಕ್ಷಗಳು ತಮ್ಮ ಕ್ಷುದ್ರ ರಾಜಕಾರಣವನ್ನು ಪ್ರದರ್ಶಿಸುತ್ತಿರುವುದು ಪ್ರಜಾಪ್ರಭುತ್ವದ ದೇವಾಲಯಕ್ಕೆ ತೋರಿದ ಅಗೌರವವಾಗಿದೆ.

ಇದು ಬೃಹತ್ತು ಹಾಗೂ ಮಹತ್ತುಗಳೆರಡನ್ನು ಸಂಭ್ರಮಿಸುವ ಅಪರೂಪದ ಕಾರ್ಯಕ್ರಮ, ಭಾರತೀಯರೆಲ್ಲರೂ ಒಂದೇ ಎಂದು ಸಾರಬೇಕಾದ ಈ ಶುಭ ಘಳಿಗೆಯಲ್ಲಿ ಕ್ಯಾತೆ ತೆಗೆಯುತ್ತಿರುವ ಈ ಪಕ್ಷಗಳ ನಾಯಕರುಗಳು ಚಿಲ್ಲರೆಯಾಗಿ ವರ್ತಿಸುತ್ತಿದ್ದಾರೆ.

ಇವರೆಲ್ಲ ಹಿಂದಿನ ಚುನಾವಣೆಯಲ್ಲಿ ಅನುಭವಿಸಿರುವ ಡಜನ್ ಗಟ್ಟಲೆ ಸೋಲುಗಳನ್ನು ಮರೆತಿರಬಹುದು, ಮೊನ್ನೆಯ ರಾಜ್ಯದ ಒಂದು ಸುಳ್ಳು ಗ್ಯಾರಂಟಿಯ ಗೆಲುವು ಇವರಿಗೆ ನೆತ್ತಿಗೇರಿರಬಹುದು. ಆದರೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.

ಸಂಸತ್ ಭವನ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲ, ನೂತನ ಭವನದ ಉದ್ಘಾಟನೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಸಂಭ್ರಮಿಸುತ್ತಾನೆ. ಇದನ್ನು ವಿರೋಧಿಸುವವರನ್ನು ನಾವು ತಿರಸ್ಕರಿಸುತ್ತೇವೆ. ಇದೇ ನಮ್ಮ ಸಂದೇಶ, ಇದು ದೆಹಲಿಯಲ್ಲಿ ಮಾತ್ರವಲ್ಲ ದೇಶದ ಪ್ರತಿ ಜಿಲ್ಲೆಯಲ್ಲೂ ನಡೆಯುವ ಸಂಭ್ರಮಾಚರಣೆ.

ಹಾಗಾಗಿ, ಅಂದು ಸಂಜೆ 6.30 ಕ್ಕೆ ನಗರದ ಎಂ.ಸಿ.ಸಿ ಎ ಬ್ಲಾಕ್ ನ ಇಸ್ಕಾನ್ ಬಳಿ, ಸಂಸತ್ ಭವನದ ಉದ್ಘಾಟನೆಯ ಸಂಭ್ರಮಾಚರಣೆ ಹಾಗೂ ಸ್ವತಂತ್ರ್ಯ ವೀರ ಸಾವರ್ಕರ್ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದಲ್ಲಿ ಎಲ್ಲ ದೇಶಭಕ್ತ ಗೆಳೆಯರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ವಾನರ ಸೇನೆ..

Leave a Reply

Your email address will not be published. Required fields are marked *

error: Content is protected !!