ಸಾರ್ವಜನಿಕರ ಬಲಿಗಾಗಿ ಕಾದಿರುವ ಆನಗೋಡು ನಾಡಕಚೇರಿ
ದಾವಣಗೆರೆ : ಜಿಲ್ಲಾ ಕೇಂದ್ರದಿಂದ 15 ಕಿಲೋಮೀಟರ್ ದೂರವಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಆನಗೋಡು ನಾಡಕಚೇರಿಯ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಶಾಸಕರು, ಸಚಿವರು, ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸದೇ ಇರುವುದು ಮಾತ್ರ ವಿಷಾದನೀಯ.
ಈ ನಾಡಕಚೇರಿ ವ್ಯಾಪ್ತಿಯಲ್ಲಿ 2 ಹೋಬಳಿಗಳು ಬರಲಿದ್ದು, 16 ಗ್ರಾಮ ಪಂಚಾಯತಿಯ 48 ಕಂದಾಯ ಗ್ರಾಮಗಳು ಹಾಗೂ ಇನ್ನಿತರ ಸೇರಿ ಒಟ್ಟು 65 ಗ್ರಾಮಗಳು ಇದರ ವ್ಯಾಪ್ತಿಗೆ ಬರಲಿದೆ, ಸುಮಾರು ಒಂದು ಲಕ್ಷ ಜನಸಂಖ್ಯಾ ವ್ಯಾಪ್ತಿಯ ಈ ನಾಡಕಚೇರಿ ಸ್ಥಿತಿ ನೋಡಿದರೆ, ಭವಿಷ್ಯ ಈ ನಾಡಕಛೇರಿಯ ವ್ಯಾಪ್ತಿಯ ಅತಿ ಕಡುಬಡವರ ಮನೆಯು ಕೂಡ ಈ ನಾಡಕಚೇರಿ ಗಿಂತ ಚೆನ್ನಾಗಿದೆ ಎನ್ನಬಹುದು.
ಸಚಿವರು ಮುಖ್ಯಮಂತ್ರಿಗಳು ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಂಚರಿಸುತ್ತಿತ್ತು ಒಮ್ಮೆಯಾದರೂ ಈ ನಾಡಕಚೇರಿಯ ಕಡೆ ನೋಡಿದ್ದಾರೆ, ನೂತನ ಕಟ್ಟಡ ನಿರ್ಮಿಸುವ ಮನಸಾದರೂ ಮಾಡುತ್ತಿದ್ದರೇನೋ ಎನಿಸುತ್ತದೆ.
ಉಪ ತಹಶೀಲ್ದಾರ್ ಸೇರಿದಂತೆ 6 ಸಿಬ್ಬಂದಿಗಳನ್ನು ಹೊಂದಿರುವ ಈ ನಾಡಕಚೇರಿಯ ಕಟ್ಟಡ ಸ್ವತಂತ್ರ ಪೂರ್ವದ ಕಟ್ಟಡವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಸಾರ್ವಜನಿಕರ, ಸಿಬ್ಬಂದಿಯ ಮೇಲೆ ಬಿದ್ದರೂ ಆಶ್ಚರ್ಯವಿಲ್ಲ. ಈ ಕಟ್ಟಡಕ್ಕೆ ಕಿಟಕಿಗಳಿಲ್ಲ, ಬಾಗಿಲುಗಳು ಭದ್ರವಿಲ್ಲಾ, ಇಲ್ಲಿಗೆ ಬರುವ ಸಾರ್ವಜನಿಕರಿಗೆ ನಿಲ್ಲಲು ಸಹ ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿರುವುದು ಮಾತ್ರ ಸರ್ಕಾರಕ್ಕೆ ಸಾರ್ವಜನಿಕರ ಮೇಲಿರುವ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಸಂಬಂಧಪಟ್ಟವರು ಈಗಲಾದರೂ ಇತ್ತ ಕಡೆ ಕಣ್ತೆರೆದು ನೋಡಿ ಸೂಕ್ತ ವ್ಯವಸ್ಥೆ ಮಾಡುವರೇ ಎಂದು ಕಾದುನೋಡಬೇಕಾಗಿದೆ.
ಕೆ.ಎಲ್.ಹರೀಶ್ ಬಸಾಪುರ.