ಕಲಿಯುವ ಉತ್ಸಾಹವಿದ್ದರೆ ಏನನ್ನಾದರೂ ಸಾಧಿಸಬಹುದು! ಕೈಗಾರಿಕಾ ತಾಂತ್ರಿಕ ಜ್ಞಾನವಿದ್ದರೆ ಐಟಿ ವಲಯದಲ್ಲಿವೆ ಹಲವು ಅವಕಾಶ

ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೂನ್ 4ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಇತ್ತೀಚಿನ ತಾಂತ್ರಿಕ ವಿಷಯಗಳ ಬಗ್ಗೆ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಎರಡನೇ ಮತ್ತು ಮೂರನೇ ವರ್ಷದ ಐಟಿ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊ0ಡರು. ಸ0ವಾದದ ರುವಾರಿಗಳಾಗಿ ಅಮೆಜಾನ್ ಕಂಪನಿಯ ಸೀನಿಯರ್ ಸಲ್ಯೂಷನ್ ಆರ್ಕಿಟೆಕ್ಟ್ ಅಖಿಲ್ ಮತ್ತು ಮೆಡಿಡೇಟಾ ಸಲ್ಯೂಷನ್ಸ್ ಕಂಪನಿಯ ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್ ಪವಿತ್ರ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಇರುವ ಅವಕಾಶ ಮತ್ತು ಅವುಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಶೈಕ್ಷಣಿಕವಾಗಿ ಬಲಗೊಳ್ಳುವುದಲ್ಲದೆ ಇತರ ಇತ್ತೀಚಿನ ತಾಂತ್ರಿಕ ಜ್ಞಾನವನ್ನು ಪಡೆಯುವುದು ಅತ್ಯಾವಶ್ಯಕ ಮತ್ತು ಹೆಚ್ಚಿನ ಪ್ಯಾಕೇಜ್ ಪಡೆಯಲು ಇದೊಂದು ಅವಕಾಶ ಕೂಡ ಎಂದು ತಿಳಿಸಿದರು. ಅಖಿಲ್ ಮತ್ತು ಪವಿತ್ರ ದಂಪತಿಗಳಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದಾರೆ. ಇಬ್ಬರೂ ಹತ್ತು ವರ್ಷಗಳ ಕೈಗಾರಿಕಾ ಅನುಭವವನ್ನು ಹೊಂದಿದ್ದು, ಗ್ರಾಮೀಣ ಪ್ರದೇಶದಿಂದ ಬಂದ0ತಹ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ದಂಪತಿಗಳನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ವಿಜಯಕುಮಾರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯ್ ಪಾಂಡೆ ಎಂ ಬಿ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ.ಆರ್, ಆಶಾ ಕೆ ಮತ್ತು ಇತರ ಅಧ್ಯಾಪಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!