ತುತ್ತು ಅನ್ನಕ್ಕೂ ತತ್ತರಿಸುತ್ತಿರುವ ಕುಟುಂಬಕ್ಕೆ ಎಪಿಎಲ್ ಕಾರ್ಡ್! 10 ವರ್ಷದಿಂದ ಅನ್ನ ಭಾಗ್ಯದ ಅನ್ನಕ್ಕೆ ಕನ್ನ

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ: ತುತ್ತು ಅನ್ನಕ್ಕೂ ಪರದಾಡುತ್ತಿರುವ ಕುಟುಂಬಕ್ಕೆ ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕಾರ್ಡ್ ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಡ ಕುಟುಂಬಕ್ಕೆ ದಕ್ಕಬೇಕಾಗಿದ್ದ ಅನ್ನ ಭಾಗ್ಯದ ಅನ್ನಕ್ಕೆ ಕನ್ನ ಹಾಕಲಾಗಿದೆ.

ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ಲಕ್ಷ್ಮಿಬಾಯಿ ಎಂಬುವರಿಗೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಡಿಸೆಂಬರ್ 12, 2012ರಂದು ಎಪಿಎಲ್ ಕಾರ್ಡ್ ವಿತರಿಸಿದ್ದು, ಇದೀಗ 2022ಕ್ಕೆ 10 ವರ್ಷವಾಗಿದೆ. ಅಷ್ಟೇಅಲ್ಲದೆ ಈ ಕುಟುಂಬ ತೀರ ಕಡು ಬಡತನದಿಂದ ಇದ್ದು ಈ ಕುಟುಂಬಕ್ಕೆ ಎಪಿಎಲ್ ಕಾರ್ಡ್ ವಿತರಿಸಬೇಕಾದರೆ ಯಾವ ಮಾನದಂಡಗಳನ್ನು ಅನುಸರಿಸಿ ಕಾರ್ಡ್ ನೀಡಿದ್ದಾರೆ ಎಂಬುದು ಗೊತ್ತಿಲ್ಲ.

ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಈ ಕುಟುಂಬಕ್ಕೆ ಬಡತನ ರೇಖೆಗಿಂತ ಮೇಲ್ಮಟ್ಟದಲ್ಲಿರುವವರ ಕಾರ್ಡ್ ವಿತರಿಸಿ ಸುಮಾರು 10 ವರ್ಷದಿಂದ ಅನ್ನ ಭಾಗ್ಯದ ಅನ್ನಕ್ಕೆ ಕತ್ತರಿ ಬೀಳುವಂತೆ ಮಾಡಲಾಗಿದೆ. ಕೊನೆ ಪಕ್ಷ ಒಂದು ಅಥವಾ ಎರಡು ಎಕರೆ ಹೊಲ ಗದ್ದೆ ಇದ್ದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತವನ್ನು ಉಳಿಸಿಕೊಂಡು ಹೇಗೋ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು. ಆದರೆ ಇವರಿಗೆ ಒಂದೇ ಒಂದು ಗುಂಟೆ ಜಮೀನು ಇಲ್ಲ, ಇಂತಹ ಕುಟುಂಬಕ್ಕೆ ಎಪಿಎಲ್ ಕಾರ್ಡ್ ನೀಡಿದ್ದು ರಾಜ್ಯ ಸರ್ಕಾರ ಮತ್ತು ಸಂಬAಧಪಟ್ಟ ಇಲಾಖೆ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.

ಎದ್ದು ಓಡಾಡದ ಸ್ಥಿತಿಯಲ್ಲಿ ಲಕ್ಷ್ಮಿಬಾಯಿ :
ಲಕ್ಷ್ಮಿಬಾಯಿ ತುಂಬಾ ಕಷ್ಟಜೀವಿ, ತಮ್ಮ ಹೆಸರಿನಲ್ಲಿ ಒಂದೇ ಒಂದು ಗುಂಟೆ ಜಮೀನಿರದೆ ಕೂಲಿನಾಲಿ ಮಾಡಿ ಜೀವನದುದ್ದಕ್ಕೂ ಇನ್ನೊಬ್ಬರ ಹೊಲದಲ್ಲಿ ಭತ್ತದ ತೆನೆ ಆರಿಸಿ ತಂದು ಅದನ್ನೇ ಅಕ್ಕಿಯನ್ನಾಗಿ ಹೊಟ್ಟೆ ತುಂಬಿಸಿಕೊ0ಡವರು. ಇವರ ಮಗಳು ಸರಸ್ವತಿಬಾಯಿ ಕೂಡಾ ಇದೇ ರೀತಿ ಭತ್ತದ ತೆನೆ ಆರಿಸಿತಂದು ಅಕ್ಕಿ ಮಾಡಿಸಿಕೊಂಡು ಅದೇ ಅಕ್ಕಿಯನ್ನು ಸೇವಿಸುತ್ತಿದ್ದಾರೆ. ಇದೀಗ ಲಕ್ಷ್ಮಿಬಾಯಿಗೆ ವಯಸ್ಸಾಗಿ, ವಿವಿಧ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದು ಎದ್ದು ಓಡಾಡದೆ ಕೂತಲ್ಲಿ ಕೂರುವ ಸ್ಥಿತಿಯಲ್ಲಿದ್ದಾರೆ.
5 ಎಕರೆಗಿಂತ ಮೇಲಿರುವ ಕುಟುಂಬಕ್ಕೆ ಎಪಿಎಲ್ ಕಾರ್ಡ್ ಮತ್ತು 5 ಎಕರೆಗಿಂತ ಕೆಳ ಮಟ್ಟದಲ್ಲಿರುವ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ವಿತರಿಸಬೇಕೆಂಬ ನಿಯಮವಿದ್ದರೂ ಆರ್ಥಿಕವಾಗಿ ಸದೃಢರಲ್ಲದ ಈ ಕುಟುಂಬಕ್ಕೆ ಎಪಿಎಲ್ ಕಾರ್ಡ್ ವಿತರಿಸಿದ್ದು ಸರ್ಕಾರದ ಇಲಾಖೆ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಕುರಿತು ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್‌ಕುಮಾರ್ ಸರಸ್ವತಿ ಬಾಯಿ ಅವರ ಹೇಳಿಕೆಯೊಂದನ್ನು ವೀಡಿಯೋ ಹರಿಬಿಟ್ಟಿದ್ದು, ಇನ್ನಾದರೂ ಸಂಬ0ಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಬಡ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ವಿತರಿಸುತ್ತಾರಾ ಕಾದು ನೋಡೋಣ..

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!