ದಾವಣಗೆರೆ ಜಿಲ್ಲಾ ಕಾಂಗ್ರೆಸ್‍ನಿಂದ ದೇವರಾಜ ಅರಸು 40ನೇ ಪುಣ್ಯಸ್ಮರಣೆ

ದಾವಣಗೆರೆ : ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿ ಶಾಮನೂರು ಶಿವಶಂಕರಪ್ಪನವರ ಸಭಾಭವನದಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ 8 ವರುಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಸಮಪಾಲು ಸಮಬಾಳು ತತ್ವದಡಿ ಆಡಳಿತ ನಡೆಸಿ ಎಲ್ಲಾ ವರ್ಗದ ಜನತೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರು ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು. 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಾಮಾಜಿಕ ನ್ಯಾಯವನ್ನು ಮುಂದುವರೆಸಿಕೊಂಡು ಹೋದ ಮಹನೀಯರು. ಅವರು ಮುಖ್ಯಮಂತ್ರಿಯಾದಂತ ಸಂದರ್ಭದಲ್ಲಿ ಜೀತಪದ್ದತಿ, ಉಳುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡಿದ್ದರು. ತಮ್ಮ ಜಮೀನನ್ನು ಸಹ ಹೂಳುವವನಿಗೆ ನೀಡುವ ಮೂಲಕ ಮಾದರಿಯಾಗಿದ್ದರು. ದಾವಣಗೆರೆಯಲ್ಲಿ ಡಾ|| ಶಾಮನೂರು ಶಿವಶಂಕರಪ್ಪನವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ ಶೀವಕುಮಾರ್ ಮಾತನಾಡಿ ಉಳುವವನೆ ಭೂಮಿ ಒಡೆಯ ಎಂಬ ಕ್ರಾಂತಿಕಾರಿಕ ಮಸೂದೆಯನ್ನು ಜಾರಿ ಮಾಡುವ ಮೂಲಕ ಈ ರಾಜ್ಯದ ಗೆಣಿದಾರರ ವಿರೋಧ ಕಟ್ಟಿಕೊಂಡರು ಸಹ ಬಡವರ ಪರವಾಗಿ ನಿಂತ ಧೀಮಂತ ವ್ಯಕ್ತಿ ಅರಸು ಅವರು ಎಂದರು. ಕಾಂಗ್ರೆಸ್ ಪಕ್ಷದ ಜಿಲ್ಲಾಘಟಕದ ಅಬ್ದುಲ್ ಘನಿ ತಾಹೀರ್ ಮಾತನಾಡಿ ಶೋಷಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಿದ ಮೊದಲ ಮುಖ್ಯಮಂತ್ರಿ ಎಂದರೆ ಅದು ದೇವರಾಜು ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಸಾಗುವಳಿದಾರರಿಗೆ ಜಮೀನು ನೀಡುವಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದರು ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ರಾಘವೇಂದ್ರ ಗೌಡ ಮಾತನಾಡಿ ದೇವರಾಜ್ ಅರಸ್ ಅವರು ತಮ್ಮ ಅಧಿಕಾರದಲ್ಲಿ ಪರಿಸರಕ್ಕೂ ಮಾನ್ಯತೆ ನೀಡಿ ಕೈಗಾರಿಕೋದ್ಯಮಿಗಳ ವಿರೋಧ ನಡುವೆಯೂ ವೃಕ್ಷ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಇಂದು ಕರ್ನಾಟಕ ರಾಜ್ಯ ಪರಿಸರ ಸ್ನೇಹಿಯಿಂದ ಕೂಡಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹರೀಶ್, ಆವರೆಗೆರೆ ಮಂಜುನಾಥ್, ಯುವರಾಜ್, ಮೇಘರಾಜ್ ಮತ್ತಿತರರಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!