ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹುಲ್ಲುಮನೆ ಗಣೇಶ್ ನೇಮಕಕ್ಕೆ ಮನವಿ

ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹುಲ್ಲುಮನೆ ಗಣೇಶ್ ನೇಮಕಕ್ಕೆ ಮನವಿ

ದಾವಣಗೆರೆ: ಸಮಾಜದ ಮುಖಂಡ ಹುಲ್ಲುಮನೆ ಗಣೇಶ್ ಅವರನ್ನು ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಸಮಾಜದ ಬಂಧುಗಳು ನಿಯೋಗ ತೆರಳಿ ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ ಹುಲ್ಲುಮನೆ ಗಣೇಶ್ ಅವರು ಜನಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ಪಾಲಿಕೆಯಲ್ಲಿ ೨೦ ವರ್ಷಗಳಿಂದ ಸಿಗದ ಎಸ್.ಟಿ. ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಹೋರಾಟ ಮಾಡುವ ಮೂಲಕ ದೊರಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ, ಗಣೇಶ್ ಅವರ ಸೇವೆ ಪರಿಗಣಿಸಿ ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿದರು.

ಶ್ರೀ ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹುಲ್ಲುಮನೆ ಗಣೇಶ್ ನೇಮಕಕ್ಕೆ ಮನವಿ

ಈ ಸಂದರ್ಭದಲ್ಲಿ ಜೀವನ್ ನಿಟುವಳ್ಳಿ, ಮಂಜುನಾಥ ತಳವಾರಹಟ್ಟಿ, ಬಾಲರಾಜ್, ಅಫ್ರೋಜ್ ಖಾನ್, ಅಬ್ಧುಲ್ ಅರ್ಷಮ್, ರಾಜು, ವಿನಯ್, ವಿಕ್ರಮ್, ನೂರುಲ್ಲಾ, ಸುಭಾನ್, ಬಸವರಾಜ್, ಇಬ್ರಾಹಿಂ, ಶ್ರೀನಿವಾಸ್, ರಾಜಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!