title release; ದಾಖಲೆ ಬರೆದ ‘ಕ್ಯಾಪ್ಚರ್’ ಚಿತ್ರದ 60 ಅಡಿ ಎತ್ತರದ ಪೋಸ್ಟರ್

ಸ್ಯಾಂಡಲ್ ವುಡ್ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಿಯಾಂಕಾ ಅವರ ಹೊಸ ಸಿನಿಮಾಗೆ ಕ್ಯಾಪ್ಚರ್ ಎಂದು ಟೈಟಲ್ ಇಡಲಾಗಿದೆ. ಸದ್ಯ ಕ್ಯಾಪ್ಚರ್ ತಂಡ ಟೈಟಲ್ ಪೋಸ್ಟರ್ ರಿಲೀಸ್ (title release) ಮಾಡುವ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅಭಿಮಾನಿಗಳ ಮಧ್ಯೆ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಖುಷಿಯ ವಿಚಾರವಾದ್ರೆ ಮತ್ತೊಂದು ಕಡೆ ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನವಾದ ಪ್ರಯತ್ನವಾಗಿದೆ ..

ವಿಶೇಷ ಎಂದರೆ ಈ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅಂದಹಾಗೆ ರವಿರಾಜ್ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ.

‘ಚಿಕ್ಕಿಯ ಮೂಗುತಿ’ ಟೀಸರ್ ಔಟ್: ಪವರ್ ಫುಲ್ ಪಾತ್ರದಲ್ಲಿ ನಟಿ ತಾರಾ

ಕ್ಯಾಪ್ಚರ್ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ವಿಭಿನ್ನವಾಗಿ ಲಾಂಚ್ ಮಾಡಲಾಯಿತು. ವೀರೇಶ್ ಚಿತ್ರಮಂದಿರದ ಮುಂಭಾಗದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕಟೌಟ್ ಪೋಸ್ಟರ್ ನಿಲ್ಲಿಸುವ ಮೂಲಕ ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೋಸ್ಟರ್ ಲಾಂಚ್ ಮಾಡಿದರು.

ಕ್ಯಾಪ್ಚರ್ ಬಗ್ಗೆ ಹೇಳುವುದಾದರೆ ಹಾರರ್ ಅಂದಮೇಲೆ ಭಯ, ಕುತೂಹಲ, ಟ್ವಿಸ್ಟ್‌ಗಳು ಇದ್ದೇ ಇರುತ್ತೆ. ಇದೆಲ್ಲದರ ಜೊತೆಗೆ ಈ ಸಿನಿಮಾ ಒಂದು ವಿಭಿನ್ನ ಅನುಭವ ನೀಡಲಿದೆ. ಯಾಕೆಂದ್ರೆ ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ.

ಸೈಲೆಂಟ್ ಆಗಿ ಸಿನಿಮಾ ಚಿತ್ರೀಕರಣ ಮುಗಿಸಿ ಟೈಟಲ್ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಕ್ಯಾಪ್ಚರ್ ಚಿತ್ರಮಂದಿರದ ಅಂಗಳಕ್ಕೆ ಬರಲು ಎದುರು ನೋಡುತ್ತಿದೆ. ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದು ರವಿಚಂದ್ರನ್ ಅವ್ರ ಸಂಕಲನವಿದೆ. ಪ್ರಿಯಾಂಕ ಉಪೇಂದ್ರ ಅವ್ರ ಜೊತೆ ಜೊತೆಗೆ ಇನ್ನು ಸಾಕಷ್ಟು ಸ್ಟಾರ್ ಕಲಾವಿದರು ಸಿನಿಮಾದಲ್ಲಿದ್ದಾರೆ…ಎಲ್ಲವು ಅಂದುಕೊಂಡಂತೆ ಆದರೆ ಸಿನಿಮಾ ಮುಂದಿನ ತಿಂಗಳು ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ ಹ್ಯಾಟ್ರಿಕ್ ಸಿನಿಮಾ ಇದಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *

error: Content is protected !!