ವಿವಿದೆಡೆ ಕಳ್ಳತನ ಮಾಡಿದ್ದ ನಾಲ್ವರ ಬಂಧನ: ಸ್ವತ್ತು ವಶ
ದಾವಣಗೆರೆ :ಹರಿಹರ ಹಾಗೂ ರಾಣೇಬೆನ್ನೂರಿನಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 10.82 ಲಕ್ಷ ರೂ. ಬೆಲೆಯ 269.5 ಗ್ರಾ.ಬಂ ಬಂಗಾರದ ಆಭರಣ, ಎರಡು ಬೈಕ್ ಸೇರಿ ಒಟ್ಟು 1.17 ಲಕ್ಷ ರೂ. ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹರಿಹರ ನಗರ ಠಾಣೆ ವ್ಯಾಪ್ತಿಯ ಜೆ.ಸಿ. ಬಡಾವಣೆ, ಲೋಹರ್ ಮೊಹಲ್ಲಾ, ದೊಡ್ಡಬೀದಿ ಹಾಗೂ ರಾಣೇಬೆನ್ನೂರು ನಗರ ಠಾಣೆ ವ್ಯಾಪ್ತಿಯ ಗೌಳಿಗಲ್ಲಿ ಗೂಡ್ ಶೆಡ್ ರಸ್ತೆಯಲ್ಲಿ ಇವರು ಮನೆ ಕಳ್ಳತನ ಮಾಡಿದ್ದರು.