29 ಪ್ರಕರಣಗಳಲ್ಲಿ ಸುಳ್ಳು ಜಾಮೀನು ಪ್ರಮಾಣ ಪತ್ರ ನೀಡಿ ವಂಚನೆ: ಬಂಧನ

ಸುಳ್ಳು ಜಾಮೀನು ಪ್ರಮಾಣ ಪತ್ರ

ದಾವಣಗೆರೆ : ನಗರದ ವಿವಿಧ ನ್ಯಾಯಾಲಯಗಳಲ್ಲಿ 29 ಪ್ರಕರಣಗಳಲ್ಲಿ ಜಮೀನು ಭದ್ರತೆಗಾಗಿ ಆರೋಪಿಗಳಿಗೆ ಸುಳ್ಳು ಜಾಮೀನು ಪ್ರಮಾಣ ಪತ್ರ ನೀಡಿದ ಹರಪನಹಳ್ಳಿ ತಾಲ್ಲೂಕು ಯಡಿಹಳ್ಳಿ ಗ್ರಾಮದ ಬಸವರಾಜಪ್ಪ (55 ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಕರಣವೊಂದರಲ್ಲಿ ಜಾಮನುದಾರರ ವಿಚಾರಣೆ ನಡೆಯುವ ವೇಳೆ ಈತ ಈ ಪ್ರಕರಣಕ್ಕೆ ಮಾತ್ರ ತಾನು ಜಾಮೀನಿಗಾಗಿ ಜಮೀನು ಪಹಣಿಯನ್ನು ಭದ್ರತೆಗಾಗಿ ನೀಡಿರುತ್ತೇನೆ. ಬೇರಾವುದೇ ನ್ಯಾಯಾಲಯದಲ್ಲಿ ನೀಡಿರುವುದಿಲ್ಲ ಎಂದು ಹೇಳಿಕೆ ನೀಡಿದ್ದ.

ನ್ಯಾಯಾಧೀಶರು ಶ್ಯೂರಿಟಿ ಸೆಕ್ಯೂರಿಟಿ ಮ್ಯಾನೇಜ್‌ಮಂಟ್ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿದಾಗ ಈ ವ್ಯಕ್ತಿ 29 ಪ್ರಕರಣಗಳಲ್ಲಿ ಜಮೀನು ಭದ್ರತೆಗಾಗಿ ಇದೇ ಪಹಣಿಯನ್ನು ನೀಡಿದ್ದು ಕಂಡು ಬಂದಿದೆ.

ನ್ಯಾಯಾಧೀಶರು ಜಾಮೀನುದಾರ ಬಸವರಾಜ ಅವರನ್ನು ಪೊಲೀಸ್ ವಶಕ್ಕೆ ನೀಡ ಕ್ರಮ ಜರುಗಿಸಲು ಸೂಚಿಸಿದ್ದರ ಹಿನ್ನೆಲೆಯಲ್ಲಿ ಬಡಾವಣೆ ಠಾಣೆಯಲ್ಲಿ ಪ್ರಕರಮ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!