ಆಶಾ ಕಾರ್ಯಕರ್ತರ ನೆರವಿಗೆ ನಿಂತ ಎಂ.ಪಿ.ಲತಾ  ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ

 

ಹರಪನಹಳ್ಳಿ:ಆಶಾ ಕಾರ್ಯಕರ್ತರಿಗೆ  ಸರ್ಕಾರ ವೇತನ ಹೆಚ್ಚಳ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು ತಾಲೂಕಿನ ಬೆಣ್ಣಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರಿಗೆ ಮೆಡಿಕಲ್ ಕಿಟ್ ಗಳನ್ನು ನೀಡಿ ಮಾತನಾಡಿದರು.
ಇವರುಗಳ ಕೆಲಸ ಚಿಕ್ಕದಿದ್ದರೂ ಪರಿಣಾಮ ಮಾತ್ರ ಅಗಾಧ, ಜನನದಿಂದ ಮರಣದವರೆಗೂ ಎಂಥದ್ದೆ ಕೆಲಸ ವಹಿಸಿದರೂ ಅಚ್ಚುಕಟ್ಟಾಗಿ ನಿರ್ವಹಿಸುವ ಇವರು ಕೂಡಾ  ಮೂಲಭೂತ ಅವಶ್ಯಕತೆಯಿಂದ ವಂಚಿತರಾಗಿರುವುದು ವಾಸ್ತವಿಕ ಸತ್ಯ ಎಂದು ಹೇಳಿದರು.
ಕೋರೋನಾ ದಂತಹ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ಎದೆಗುಂದದೆ ಯುದ್ದ ಕಾಲದಲ್ಲಿ ಯೋಧರ ರೀತಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇಂತಹವರ ಸಹಾಯಕ್ಕೆ ಸರ್ಕಾರ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು. ಕೋರೋನಾ ಸೊಂಕು ಬಹಳಷ್ಟು ಇಳಿಮುಖವಾಗಿದ್ದು, ಮೂರನೆ ಅಲೆ ಬರದ ಹಾಗೆ  ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್  ಗಳನ್ನು ಧರಿಸಿ  ಎಚ್ಚರದಿಂದ ಇರಬೇಕು  ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ತಾಲೂಕು ಯುವ ಕಾಗ್ರೇಸ್ ಅಧ್ಯಕ್ಷ ಮತ್ತೂರು ಬಸವರಾಜ,ಕಂಚಿಕೇರಿ ಜಯಲಕ್ಷ್ಮಿ,ಕವಿತಾ ಸುರೇಶ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!