ಆಗಸ್ಟ್ .೬ ರಂದು ಯಕ್ಷರಂಗ, ಯಕ್ಷಗಾನ ಸರ್ವ ಸದಸ್ಯರ ಮಹಾಸಭೆ

ಆಗಸ್ಟ್ . ೬ ರಂದು ಯಕ್ಷರಂಗ, ಯಕ್ಷಗಾನ ಸರ್ವ ಸದಸ್ಯರ ಮಹಾಸಭೆ

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ,ಯಕ್ಷಗಾನ ಸಂಸ್ಥೆಯ ಸರ್ವ ಸದಸ್ಯರ ಮಹಾಸಭೆಯನ್ನು ಕರೆಯಲಾಗಿದೆ ಎಂದು ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ ೬ ರಂದು ಭಾನುವಾರ ಬೆಳಿಗ್ಗೆ ೧೧-೦೦ ಕ್ಕೆ ದಾವಣಗೆರೆಯ ಕಸ್ತೂರ್ಬಾ ಬಡಾವಣೆಯ ಕುವೆಂಪು ರಸ್ತೆಯಲ್ಲಿರುವ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.

ಈ ಮಹತ್ವಪೂರ್ಣ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ, ಅನುಮೋದನೆ, ವಾರ್ಷಿಕ ವರದಿ, ೨೦೨೩-೨೫ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮುಂತಾದ ಪ್ರಕ್ರಿಯೆ ನಡೆಯಲಿದೆ ಎಂದು ಯಕ್ಷರಂಗದ ಗೌರವ ಅಧ್ಯಕ್ಷರಾದ ಬಿ. ಶಾಂತಪ್ಪ ಪೂಜಾರ್ ತಿಳಿಸಿದ್ದಾರೆ. ಕಲಾಕುಂಚ ಹಾಗೂ ಯಕ್ಷರಂಗದ ಸರ್ವ ಸದಸ್ಯರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!