ಲೋಕಲ್ ಸುದ್ದಿ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ

ದಾವಣಗೆರೆ : ಯಕೃತ್ತಿನಲ್ಲಿ ಉರಿಯೂತವನ್ನು ಉಂಟುಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್‍ಗಳಿಂದ ಹರಡುತ್ತದೆ ಎಂದು ಆಡಳಿತ ವೈದ್ಯಾಧಿಕಾರಿಗಳಾದ ವೆಂಕಟೇಶ್ ಎಲ್.ಡಿ ತಿಳಿಸಿದರು. ಶುಕ್ರವಾರ ಕಕ್ಕರಗೊಳ್ಳದ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ವಿಶ್ವ ಹೆಪಟೈಟಿಸ್ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೆಪಟೈಟಿಸ್ ವೈರಸ್‍ಗಳು ಹೆಚ್ಚು ಅಪಾಯಕಾರಿಯಾಗಿದ್ದು, ಹಲವು ವರ್ಷಗಳ ವರೆಗೆ ರೋಗದ ಯಾವುದೇ ಲಕ್ಷಣಗಳನ್ನು ತೋರ್ಪಡಿಸಿವುದಿಲ್ಲ ಆದ್ದರಿಂದ ಜಾಗೃತರಾಗಿ ಮುಂಚಿತವಾಗಿಯೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಹೇಳಿದರು. ಹೆಪಟೈಟಿಸ್ ವೈರಸ್‍ಗಳನ್ನು ಹೆಪಟೈಟಿಸ್ ಎ.ಬಿ.ಸಿ ಎಂದು ಗುರುತಿಸಲಾಗುವುದು. ಆಸ್ಪತ್ರೆಯಲ್ಲಿ ರೋಗಿಯ ರಕ್ತದೊಂದಿಗೆ ಸಂಪರ್ಕ ಬಂದಾಗ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ತಗಲುವ ಅವಕಾಶ ಹೆಚ್ಚಿರುತ್ತದೆ, ಅಸುರಕ್ಷಿತ ಲೈಂಗಿಕತೆ, ರಕ್ತಪೂರ್ಣ ಪ್ರಕ್ರಿಯೆ, ಒಬ್ಬರು ಬಳಸಿದ ಸೂಜಿ, ಸಿರೆಂಜ್‍ಗಳನ್ನು ಮತ್ತೊಬ್ಬರು  ಬಳಸಿದಾಗ, ಜನನದಲ್ಲಿ ಸೋಕು ಪೀಡಿತ  ತಾಯಿಯಿಂದ ಮಗುವಿಗೆ ಹರಡುತ್ತವೆ.

ಮನುಷ್ಯನಲ್ಲಿ ಈ ರೋಗ ಉಲ್ಬಣಗೊಂಡಾಗ ಆಯಾಸ, ಕೀಲು ನೋವು, ಜ್ವರ, ತಲೆಸುತ್ತುವಿಕೆ, ವಾಂತಿ, ಹಸಿವಾಗದಿರುವುದು, ಹೊಟ್ಟೆ ನೋವು, ಕಾಮಲೆ, ಗಾಡ ವರ್ಣದ ಮೂತ್ರ, ಚರ್ಮ ಹಳದಿ ಮತ್ತು ತುರಿಕೆ ಇನ್ನಿತರ ಸಮಸ್ಯೆಗಳನ್ನುಂಟು ಮಾಡುತ್ತದೆ. ಈ ವೈರಸ್ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಹಾಗೂ ಸೋಂಕಿಗೆ ತ್ತುತ್ತಾದವರು ಹೆಪಟೈಟಿಸ್ ಬಿ ಗೆ ಸರ್ಫೆಸ್, ಮತ್ತು ಆ್ಯಟಿಬಾಡಿ ಜನ್ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಜೆ.ಜೆ.ಎಂ.ಸಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಅನುಷಾ,  ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top