ಆಂಧ್ರಪ್ರದೇಶದಲ್ಲಿ ಹರಿಹರ ಸೃಷ್ಟಿಗೆ ಯೋಗಾ ರತ್ನ ಪ್ರಶಸ್ತಿ ಪ್ರದಾನ

ಆಂಧ್ರಪ್ರದೇಶದಲ್ಲಿ ಹರಿಹರ ಸೃಷ್ಟಿಗೆ ಯೋಗಾ ರತ್ನ ಪ್ರಶಸ್ತಿ ಪ್ರದಾನ

ದಾವಣಗೆರೆ :ವಿಭಿನ್ನ ಯೋಗ ನೃತ್ಯ ಪ್ರದರ್ಶನ ನೀಡಿದ ಹರಿಹರದ ಕು.ಸೃಷ್ಟಿ ಯವರಿಗೆ ಆಂಧ್ರ ಪ್ರದೇಶದ ಹೊಸಹಳ್ಳಿ ಪುರವರ್ಗ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಗಳು “ಯೋಗ ರತ್ನ” ಬಿರುದು ನೀಡಿ ಪುರಸ್ಕಾರ ನೀಡಲಾಯಿತು.
ಏಳನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನ ನೀಡಿ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಕಳೆದ ದಿನಗಳು ಹಿಂದೆ ತಾನೇ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮಿ ಜೀ ಯಾವುದೇ ಮೆಚ್ಚುಗೆ ವ್ಯಕ್ತಪಡಿಸಿ ಆಶಿರ್ವಾದ ಮಾಡಿ ಗೌರವಿಸಿದ್ದರು.
ಹಾಗೇಯೇ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಫಲಕ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದ ಸೃಷ್ಟಿ ನಿನ್ನೆ ಆಂಧ್ರ ಪ್ರದೇಶದ ಹೊಸಹಳ್ಳಿ ಗ್ರಾಮದ ಪುರವರ್ಗ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವ ಅಂಗವಾಗಿ ನೆಡೆದ ಯೋಗ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದುದಲ್ಲದೇ ವಿಶೇಷ ಯೋಗಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸೃಷ್ಟಿ ಈ ಹಿಂದೆ ನೇಪಾಳದ ಖಡ್ಮಂಡುನಲ್ಲಿ ಸತತ ಸೂರ್ಯ ನಮಸ್ಕಾರ ಹಾಕಿ ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದನ್ನು ಸ್ಮರಿಸಬಹುದು.
ದಾವಣಗೆರೆ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಸೃಷ್ಟಿ ಹರಿಹರದ ನೀಲಕಂಠೇಶ್ವರ ಶಾಲೆ ಯು ಆಡಳಿತ ಮಂಡಳಿ
ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!