ಮಟ್ಕಾ ಜೂಜಾಟದ ಮೇಲೆ ಆಜಾದ್ ನಗರ ಪೊಲೀಸರ ದಾಳಿ

ದಾವಣಗೆರೆ; ದಿನಾಂಕ: 29-03-2024 ರಂದು ಸಂಜೆ ಸಮಯದಲ್ಲಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ತರ್ ರಾಜಾ ಸರ್ಕಲ್ ನ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಬಂದ ಮೇರೆಗೆ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಅಶ್ವೀನ್ ಕುಮಾರ್ ರವರು & ತಂಡವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಓರ್ವ ಆರೋಪಿತನನ್ನು ವಶಕ್ಕೆ ಪಡೆದು, ಆರೋಪಿತರಿಂದ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 6400/- ರೂಗಳನ್ನು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತನ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!