ಚುನಾವಣಾ ಹೊತ್ತಲ್ಲೇ ಕಾನೂನು ವಿವಿ ಅವಾಂತರ; ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿಬಿದ್ದ ಕ್ರೈಸ್ತ ಸಮುದಾಯ
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇದೀಗ ವಿವಾಧ ಗೂಡಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣಾ ಹೊತ್ತಲ್ಲಿ ವಿವಿ ಕೈಗೊಂಡ ನಿರ್ಧಾರದಿಂದಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುಜುಗರದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಕರ್ನಾಟಕ ರಾಜ್ಯ ಕಾನೂನು ವಿವಿ ಈ ಬಾರಿ ‘ಈಸ್ಟರ್’ ದಿನದಂದು ಪರೀಕ್ಷೆಯನ್ನು ನಿಗದಿಗೊಳಿಸಿದೆ. ಗುಡ್‌ಫ್ರೈಡೇ ನಂತರದ ಭಾನುವಾರ ನಡೆಯುವ ‘ಈಸ್ಟರ್’ ಇಡೀ ಜಗತ್ತಿಗೆ ಶ್ರದ್ಧಾಭಕ್ತಿಯ ಆಚರಣೆ. ಆದರೆ KSLU ನಡೆಯಿಂದಾಗಿ ಕ್ರೈಸ್ತ ಸಮುದಾಯವು ಸಿದ್ದರಾಮಯ್ಯ ಸರ್ಕಾರದ ವಿರುದ್ದ ತಿರುಗಿ ಬೀಳುವಂತಾಗಿದೆ.
ಪರೀಕ್ಷೆ ಮುಂದೂಡುವ ಬದಲು ಹಿಂದೂಡಿದ ವಿವಿ..!
ಏಪ್ರಿಲ್ 2ರಂದು ನಿಗದಿಯಾಗಿದ್ದ ಕಾನೂನು ವಿವಿ ಪರೀಕ್ಷೆಯನ್ನು ಪರೀಕ್ಷೆಯನ್ನು ಈಸ್ಟರ್ ಆಚರಣೆಯ ದಿನದಂದು ಪೂರ್ವನಿಗದಿ ಮಾಡಿದೆ. ಅದೂ ಕೂಡಾ ಭಾನುವಾರದ ರಜೆಯ ದಿನದಂದೇ ಈಸ್ಟರ್ ಇರುವುದನ್ನು ತಿಳಿದಿದ್ದರೂ ಅದೇ ದಿನ ಪರೀಕ್ಷೆಯನ್ನು ನಿಗದಿ ಮಾಡುವ ಮಾಡುವ ವಿವಿಯು ವಿವಾದದ ನಡೆ ಅನುಸರಿಸಿದೆ. ಈ ಬಗ್ಗೆ ವಿವಿ ಕುಲಪತಿ ಹಾಗೂ ಕುಲಸಚಿವರ ಕಚೇರಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕ್ರೈಸ್ತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸೋನಿಯಾ, ರಾಹುಲ್, ಖರ್ಗೆಗೂ ಮುಜುಗರ..!
ಈ ನಡುವೆ KSLU ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈಸ್ಟರ್ ಆಚರಣೆಗೆ ಅಡ್ಡಿಯಾಗಲೆಂದೇ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಕ್ರೈಸ್ತರ ಧಾರ್ಮಿಕ ಹಕ್ಕನ್ನು ಸಿದ್ದರಾಮಯ್ಯ ಸರ್ಕಾರ ಕಸಿದುಕೊಳ್ಳುತ್ತಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಅಂದ್ರೆ ಇದೇನಾ? ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ.ಪಾಟೀಲ್‌ಗೆ ಪ್ರಶ್ನೆಗಳ ಸುರಿಮಳೆ..!
ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವದ ಕಾಂಗ್ರೆಸ್ ರಕ್ಷಿಸುತ್ತಿದೆ ಎಂಬ ನಂಬಿಕೆ ಕರ್ನಾಟಕ ಕಾನೂನು ವಿವಿ ನಡೆಯಿಂದ ಹುಸಿಯಾಗಿದೆ ಎಂದಿರುವ ಕ್ರೈಸ್ತ ಸಮುದಾಯದ ಮಂದಿ, ಈಸ್ಟರ್ ದಿನ (ಭಾನುವಾರ) ಪರೀಕ್ಷೆ ನಿಗದಿ ಪಡಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ಒಪ್ಪಿಗೆ ಇದೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆ? ಸೋನಿಯಾ ಮುಂದೆ ಕ್ರೈಸ್ತರ ಪ್ರಶ್ನೆ..!
ಇಡೀ ಜಗತ್ತೇ ಶ್ರದ್ಧೆಯಿಂದ ಆಚರಿಸುವ ಈಸ್ಟರ್‌ಗೆ ಯಾವ ದೇಶದಲ್ಲೂ ಅಡ್ಡಿಯಾದ ಇತಿಹಾಸವಿಲ್ಲ. ಆದರೆ, ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಸಿದ್ದರಾಮಯ್ಯ ಸರ್ಕಾರ ಮಾತ್ರ ಕ್ರೈಸ್ತರ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿದೆ ಎಂದು ಆಕ್ರೋಶ ಹೊರಹಾಕಿರುವ ಕ್ರೈಸ್ತ ಸಮುದಾಯದ ಪ್ರಮುಖರು, ಕ್ರೈಸ್ತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಕ್ರೈಸ್ತರು ಮತ ನೀಡಬೇಕೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.