ಬಾಪೂಜಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮತ್ತೊಮ್ಮೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ

ಬೀಳಗಿ: ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ(ರಿ) ಬಾಪೂಜಿ ಸ್ವತಂತ್ರ ಪದವಿ ಪೂರ್ವ ವಿದ್ಯಾಲಯ ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ೧೦೦ ಕ್ಕೆ ೧೦೦ ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಸತತವಾಗಿ ೨ನೇ ಬಾರಿಯೂ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಶ್ವೇತಾ ಆರ್ ಹೆಬ್ಬಾಳ ೬೦೦ ಕ್ಕೆ ೫೯೧ ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ೮ನೇ ರ‍್ಯಾಂಕ್. ಸಾಕ್ಷಿ ಬೊಸಗಿ ೫೮೭, ಶ್ರೀಧರರೆಡ್ಡಿ ೫೮೬, ಮಲ್ಲಿಕಾರ್ಜುನ ಬಸರಕೊಡ ೫೮೫, ಮಯೂರ ಹೆಚ್ ಹಾಗೂ ಸ್ವಾತಿ ಬಗಲಿ ೫೮೪ ಅಂಕ ಗಳಿಸಿದ್ದಾರೆ ಮತ್ತು ೧೨೧ ವಿದ್ಯಾರ್ಥಿಗಳಲ್ಲಿ ೧೦೩ ವಿದ್ಯಾರ್ಥಿಗಳು ಡಿಸ್ಟಿçಂಕ್ಷನ್ ಹಾಗೂ ೧೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚಿ ನಮ್ಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್.ಆರ್. ಪಾಟೀಲ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಎಮ್.ಎನ್. ಪಾಟೀಲ ಪ್ರಾಚಾರ್ಯರಾದ ಶಿವಬೋದ ಶೆಟ್ಟಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.”

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!