ಹರಿಹರ ಶಾಸಕ ಬಿ.ಪಿ ಹರೀಶ್ ಆಪ್ತ ಆರ್.ಎಸ್.ಎಸ್. ಕಟ್ಟಾಳು ಹಿಂದೂಪರ ಹೋರಾಟಗಾರ ಎಬಿಂಎಂ ವಿಜಿ ಕಾಂಗ್ರೆಸ್ ಸೇರ್ಪಡೆ
ದಾವಣಗೆರೆ: ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ದಂಡಯಾತ್ರೆ ಪ್ರಾರಂಭಿಸಿರುವ ಮುನ್ಸೂಚನೆ ಕಂಡುಬಂದಿದೆ.
ಇಂದು ಹರಿಹರ ನಗರದ ಪ್ರಖ್ಯಾತ ಉದ್ಯಮಿ ಅಮರಾವತಿ ಮಲ್ಲೇಶಪ್ಪ ಇವರ ಮಕ್ಕಳಾದ ABM ವಿಜಯ್ ಕುಮಾರ್ ನಗರಸಭೆ ಸದಸ್ಯರು ಹಾಗೂ ABM ವಿಶ್ವನಾಥ್ ಸಹೋದರರು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ನಂದಿಗಾವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡ ಆರ್ ಎಸ್ ಎಸ್ ಕಟ್ಟಾಳು, ಹರಿಹರ ಬಿಜೆಪಿ ಶಾಸಕರ ಆಪ್ತ ಹಾಗೂ ಹಿಂದೂ ಸಂಘಟನೆಯ ಮುಖಂಡ ಎಬಿಎಂ ವಿಜಯ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಭಲ ಬಂದಂತಾಗಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.