ದಾವಣಗೆರೆಯಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ಕೊಲೆಗಾರನನ್ನು ಹಿಡಿದ ಬೆಲ್ಜಿಯಂ ತಳಿಯ ಪೋಲಿಸ್ ಡಾಗ್ ‘ತಾರಾ’

ದಾವಣಗೆರೆ : ಈಕೆಗೇನ್ನು ಒಂದು ವರ್ಷ, ತನ್ನ ವಾಸನೆ ಗ್ರಹಿಕೆಯಿಂದಲೇ ಕೊಲೆಗಾರನನ್ನು ಹಿಡಿಯುವ ಚಾಣಾಕ್ಷೆ. ವೇಗದಲ್ಲಿ ಈಕೆಯನ್ನು ಮೀರಿಸೋರಿಲ್ಲ.ಹೌದು, ದಾವಣಗೆರೆ ಪೊಲೀಸ್ ಡಾಗ್ ಸ್ಕ್ವಾಡ್   ನಲ್ಲಿನ ತಾರಾ ಎಂಬ ಶ್ವಾನವೇ ಈ ಗುಣವನ್ನು ಹೊಂದಿದ್ದು, ಪ್ರಥಮ ಬಾರಿಗೆ ಕೊಲೆಗಾರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ಆಗಸ್ಟ್.6 ರಂದು ಯುವಕನೊಬ್ಬನ ಕೊಲೆ ನಡೆದಿದೆ. ತಕ್ಷಣ ಪೊಲೀಸರು ಮಲ್ಲಶೆಟ್ಟಿಹಳ್ಳಿ ಕ್ರಾಸ್ ಗೆ ಓಡಿದ್ದಾರೆ. ಯುವಕನ ತಲೆಗೆ ಬಲವಾಗಿ ದೊಣ್ಣೆ ರಾಡ್ ನಿಂದ ಹೊಡೆದ ಗುರುತುಗಳಿದ್ದು ಇದು ನೋಡಿದ ತಕ್ಷಣ ಕೊಲೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆತನ ಗುರುತು ವಿಳಾಸ ಪತ್ತೆ ಹಚ್ಚಿದಾಗ ಈತ ರಾಮನಗರ 26 ವರ್ಷದ ಯುವಕ ನರಸಿಂಹ ಎಂಬುದು ಪೊಲೀಸರಿಗೆ ತಿಳಿದುಬಂದಿದೆ.

ಹಣಕಾಸಿನ ವಿಷಯದಲ್ಲಿ ಕೊಲೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿದಿದೆ. ನಂತರ ದಾವಣಗೆರೆ ಪೊಲೀಸರು ತಾರಾಳನ್ನು ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಬಳಿಕ ಈ ತಾರಾಳಗೆ ತಲೆಗೆ ಒಡೆದಿದ್ದ ಮರದ ತುಂಡು ಸಿಕ್ಕಿದೆ. ಆ ಮರದ ತುಂಡಿನ ಪೆಡ್ಲರ್ ಮರದ ವಾಸನೆ ತೋರಿಸಲಾಗಿದೆ. ತಕ್ಷಣ ಸನ್ನದ್ದವಾದ ತಾರಾ ಕೊಲೆಗಾರ ನಡೆದುಹೋದ ಜಾಗಕ್ಕೆ ಬೆವರಿನ ವಾಸನೆ ಹಿಡಿದು ಸುಮಾರು ಎಂಟು ಕಿ.ಮೀ.ಕ್ರಮವಹಿಸಿ ಕೊಲೆಗಾರನನ್ನು ಪತ್ತೆ ಹಚ್ಚಿದೆ. ಕೊಲೆ ನಡೆದು 12 ಗಂಟೆ ಕಳೆಯುವಷ್ಟರಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಈ ತಾರಾ ಯಶಸ್ವಿಯಾಗಿದೆ.

ಕೊಲೆಯಾದ ಮಲ್ಲಶೆಟ್ಟಿಹಳ್ಳಿ ಕ್ರಾಸ್ ನಿಂದ ಹೊರಟ ತಾರಾ ಶ್ವಾನ ಎನ್. ಹೆಚ್ 4 ರಸ್ತೆ ಮುಖಾಂತರ ಬಾಡಾ ಕ್ರಾಸ್ ವರೆಗು ಬಂದು, ನಂತರ ಎಸ್ ಎಸ್ ಹೈಟೆಕ್ ಆಸ್ಪತ್ರೆ ದಾಟಿ ಸುಮಾರು 8 ಕಿ ಮೀ ಗಳನ್ನು ಕ್ರಮಿಸಿ ಶ್ರೀರಾಮನಗರದ ಮನೆಯೊಂದರ ಬಳಿ ನಿಂತಿದೆ. ಆ ಮನೆಯಲ್ಲಿ ವಾಸವಾಗಿದ್ದವನು ಬೇರೆ ಯಾರು ಅಲ್ಲ, ಕೊಲೆ ಮಾಡಿದ ಶಿವಯೋಗಿ ಎಂಬುದು ಪೊಲೀಸರಿಗೆ ಖಚಿತವಾಗಿದೆ. ಸುಮಾರು ಎಂಟು ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತಾರಾ ಕಾರ್ಯಕ್ಕೆ ಪೊಲೀಸರೇ ಅಚ್ಚರಿಪಟ್ಟಿದ್ದಾರೆ.

ಡಾಗ್ ಸ್ಕ್ವಾಡ್‌ಗೆ ಹೊಸದಾಗಿ ಬಂದು ಕ್ರೈಂ ಬ್ರಾಂಚ್ ಗೆ ಬಲ ತುಂಬಿರುವ ತಾರಾ ಆರೋಪಿ ಮನೆ ಬಳಿ ನಿಂತಿದ್ದು ಇವನೇ ಕೊಲೆಗಾರ ಎಂದು ಸುಳಿವು ನೀಡಿತ್ತು. ಶ್ವಾನದ ವಾಸನೆ ಹಿಡಿದ ದಾವಣಗೆರೆ ಗ್ರಾಮಾಂತರ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ ಕೊಲೆ ಹಿಂದಿನ ಕಾರಣ ಸತ್ಯ ಬಿಚ್ಚಿಟ್ಟಿದ್ದಾರೆ. ತಾರಾ -ಅತ್ಯಂತ ಸೂಕ್ಷ್ಮಗ್ರಹಿ ಶ್ವಾನ‌ ,ಬಿಲ್ಜಿಯಂ ಮೆಲೋನಿಸ್ ಎಂಬ ವಿಶಿಷ್ಟ ತಳಿಯ ಒಂಬತ್ತು ತಿಂಗಳ ಶ್ವಾನ ಇದಾಗಿದೆ.  ಅಮೆರಿಕಾದಂತಹ ದೇಶಗಳ ಪೊಲೀಸ್ ಹಾಗೂ ಸೇನೆಗಳಲ್ಲಿ‌ ಬಳಕೆ ಆಗುವ ವಿಶಿಷ್ಟ ತಳಿಯದ್ದಾಗಿದೆ. ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಇಂತಹ ವಿಶಿಷ್ಟ ತಳಿ ಇರುವ ಏಕೈಕ ಪೊಲೀಸ್ ಶ್ವಾನ ಇದಾಗಿದೆ. ತಾರಾ ಈವರೆಗೆ 14 ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದೆ.ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದು ಇತ್ತೀಚಿಗೆ ತಾನೇ ದಾವಣಗೆರೆ ಕ್ರೈಂ ವಿಭಾಗಕ್ಕೆ ಒಂಬತ್ತು ತಿಂಗಳ ವಯಸ್ಸಿನ ‌ಪೊಲೀಸ್ ಶ್ವಾನ ತಾರಾ ಸೇರಿಕೊಂಡಿತ್ತು. ಈ ಶ್ವಾನವು C R P F ನಲ್ಲಿ ನುರಿತ ತಜ್ಞ ಮಧುಸೂದನ ಸಿಆರ್ ಪಿಎಫ್ , ದಕ್ಷಿಣ ಕೇಂದ್ರ ಸ್ಥಾನದ ಶ್ವಾನ ತರಬೇತುದಾರ ಇವರಿಂದ ತರಬೇತಿ ಪಡೆದ ಶ್ವಾನವಾಗಿದೆ.

ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿ: ಕೊಲೆ ಆರೋಪಿ ಶಿವಯೋಗಿ ಮತ್ತು ನರಸಿಂಹ ಇಬ್ಬರೂ ಪರಿಣತರರು, ಹೆಚ್ಚಾಗಿ ಸ್ನೇಹಿತರೂ ಆಗಿದ್ದರು. ನರಸಿಂಹ ನಿಮ್ಮ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಶಿವಯೋಗಿ ಬಳಿ 35 ಸಾವಿರ ರೂ. ಅಡ್ವಾನ್ಸ್‌ ಹಣ ಪಡೆದಿದ್ದಾನೆ. ನಂತರ, ಎಷ್ಟು ಬಾರಿ ಕೆಲಸಕ್ಕೆ ಕರೆದರೂ ಬಂದಿಲ್ಲ. ಇದಾದ ನಂತರ ಹಣವನ್ನು ಮರಳಿಸಿ ಕೊಡು ಎಂದರೂ ಕೊಡದೇ ಸತಾಯಿಸಿದ್ದಾನೆ. ನಂತರ ಶಿವಯೋಗಿ ಪೊಲೀಸ್‌ ಠಾಣೆಗೆ ದೂರು ನೀಡಿದ, ನರಸಿಂಹನನ್ನು ಜೈಲಿಗೆ ಕಳುಹಿಸಿದ್ದನು. ನರಸಿಂಹನ ಮೇಲೆ ನಾವು ದಾವಣಗೆರೆ ವಿದ್ಯಾನಗರ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಸಿಟ್ಟಿನಿಂದ ಶಿವಯೋಗಿ ಮೇಲೆ ದ್ವೇಷ ಸಾಧಿಸುತ್ತಿದ್ದನು. ಹೀಗೆ ಬಿಟ್ಟರೆ ಮುಂದೊಂದು ದಿನ ನನ್ನನ್ನು ಕೊಲೆ ಮಾಡುತ್ತಾನೆಂಬ ಭಯದಿಂದ ನರಸಿಂಹನನ್ನು ಆಗಸ್ಟ್.6 ರಂದು ರಾತ್ರಿ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿ ಆಗಿದ್ದನು.

ನರಸಿಂಹ ಸಾವಿನ ಬಗ್ಗೆ ದೂರು ದಾಖಲು: ರಾಮನಗರದ ಯುವಕ ಕೊಲೆ ಪ್ರಕರಣದ  ಬಗ್ಗೆ ಆಗಸ್ಟ್. 7 ರಂದು ಶ್ರೀರಾಮನಗರದ ಲಲಿತಮ್ಮ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಶ್ರೀರಾಮನಗರ ವಾಸಿಯಾದ ನಮ್ಮ ತಂಗಿ ತಿಮ್ಮಕ್ಕನ ಮಗ ನರಸಿಂಹ, ಮಲ್ಲಶೆಟ್ಟಿಹಳ್ಳಿ ಹತ್ತಿರ ಎನ್.ಹೆಚ್-48 ರಸ್ತೆಯ ಸರ್ವಿಸ್ ರಸ್ತೆಯಲ್ಲಿ ತೀರಿಕೊಂಡಿರುತ್ತಾನೆಂದು ತಿಳಿದು ಬಂದ ಮೇರೆಗೆ ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಸರ್ವಿಸ್ ರಸ್ತೆಯ ಬದಿಯಲ್ಲಿ ನರಸಿಂಹನ ಹೆಣ ಬಿದ್ದಿತ್ತು. ಈತನ ತಲೆಗೆ ಬಲವಾದ ರಕ್ತಗಾಯವಾಗಿ ನೆಲದ ಮೇಲೆ ರಕ್ತ ಹರಿದಿತ್ತು. ಆಗಸ್ಟ್. 6 ರಂದು ರಾತ್ರಿ ಯಾವುದೋ ಸಮಯದಲ್ಲಿ ನರಸಿಂಹನ ತಲೆಗೆ ಯಾರೋ ಯಾವುದೋ ಕಾರಣಕ್ಕೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಇವರ ಮೇಲೆ ಕಾನೂನು ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

ಪೊಲೀಸರು ಆರೋಪಿ ಶಿವಯೋಗಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಡಿವೈಎಸ್ಪಿ ಬಸವರಾಜ್ ಸರ್ಕಲ್ ಇನ್ಸಪೆಕ್ಟರ್ ಕಿರಣ್ ಕುಮಾರ್, ಪಿಎಸ್ ಐ ಹಾರೂನ್ ಅಖರ್, ಎ.ಎಸ್.ಐ ನಾರಪ್ಪ ಮತ್ತು ಸಿಬ್ಬಂದಿ ಹಾಗೂ ಡಾಗ್ ಸ್ವ್ಕಾಡ್ ನ ತಾರಾ ಬಳಗದ ಪ್ರವೀಣ್, ಪ್ರಕಾಶ್ ರನ್ನು ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!