ಲೋಕಲ್ ಸುದ್ದಿ

ಲೋಕಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರಾಗಿ ಪಾರ್ವತಮ್ಮ ಅಡಿವೆಪ್ಪ ಆವಿರೋಧ ಆಯ್ಕೆ

ದಾವಣಗೆರೆ:ಲೋಕಿಕೆರೆ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ತೆರವಾಗಿದ್ದ ಸ್ಥಾನಗಳಿಗೆ ಅಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುಳಾ ರವರು ಘೋಷಿಸಿದರು.ಲೋಕಿಕೆರೆ ಪಂಚಾಯಿತಿ ಎರಡನೇ ಬಾರಿಗೆ  ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ ಮೀಸಲು ಇದ್ದು ಈ ಸ್ಥಾನವನ್ನು ಶ್ರೀಮತಿ ಶಿಲ್ಪಾ ಶಿವಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು ಸ್ಥಾನಕ್ಕೆ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ ಅವಿರೋಧ ಆಯ್ಕೆಯಾದರು.

ಈ ಸಂದರ್ಭ ದಲ್ಲಿ ಸಹಾಯಕ ಚುನಾವಣಾಧಿಕಾರಿ ಜಗದೀಶ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಶ್ವಿನಿ ಕಾರ್ಯದರ್ಶಿ ಸುರೇಶ್ ಹಾಗೂ ಸಿಬ್ಬಂದಿ ವರ್ಗ ಪಂಚಾಯತ್ ಎಲ್ಲಾ ಸದಸ್ಯರು ಗ್ರಾಮದ ಹಿರಿಯರು ಮುಖಂಡರು, ಭಾಗವಹಿಸಿ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೇ ಅಭಿನಂದಿಸಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜನಪರ ಕೆಲಸ ಮಾಡುವಂತೆ ಶುಭಕೋರಿದರು.

Click to comment

Leave a Reply

Your email address will not be published. Required fields are marked *

Most Popular

To Top