19 ಗ್ರಾಮ ಪಂಚಾಯ್ತಿಗಳಿಗೆ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಪಾವತಿಗೆ ಬೆಸ್ಕಾಂ ಸೂಚನೆ!

ದಾವಣಗೆರೆ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸಂಬ0ಧಿಸಿದ0ತೆ ಮೇ-2022ರ ಅಂತ್ಯಕ್ಕೆ ಬೆಸ್ಕಾಂ ದಾವಣಗೆರೆ ವಿಭಾಗದ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿನ 19 ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಮೊತ್ತವನ್ನು ಏಳು ದಿನಗಳ ಒಳಗಾಗಿ ಪಾವತಿಸುವಂತೆ ಬೆಸ್ಕಾಂ ಸೂಚಿಸಿದೆ.

ವಿದ್ಯುತ್ ಶುಲ್ಕ ಬಾಕಿ ಮೊತ್ತ ಪಾವತಿಸದೇ ಇದ್ದಲ್ಲಿ ಗ್ರಾಪಂ ಪಿಡಿಓ ಅವರು ತಮ್ಮ ವ್ಯಾಪ್ತಿಗೆ ಬರುವ ವಿದ್ಯುತ್ ಸ್ಥಾವರಗಳ ಕ್ರೋಢಿಕರಿಸಿದ ವಿದ್ಯುತ್ ಬಾಕಿ ಮೊತ್ತವನ್ನು ಗ್ರಾಪಂ ಪಿಡಿಓ ಕಚೇರಿಯ ಆರಾರ್ ಸಂಖ್ಯೆಗೆ ವರ್ಗಾವಣೆ ಮಾಡಿ ವಿದ್ಯುತ್ ಕಡಿತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅಗುವ ತೊಂದರೆಗೆ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ದಾವಣಗೆರೆ ಜವಾಬ್ದಾರರಾಗುವುದಿಲ್ಲ ಎಂದು ಸ್ಟಷ್ಟಪಡಿಸಿದೆ.

ದಾವಣಗೆರೆ ಗ್ರಾಮೀಣ ಉಪ ವಿಭಾಗದಲ್ಲಿನ ಎಲೆಬೇತೂರು 57.85 ಲಕ್ಷ, ಬಸವನಾಳ್ 9.89 ಲಕ್ಷ, ಕಾಡಜ್ಜಿ 30.68 ಲಕ್ಷ, ಕಡ್ಲೆಬಾಳು 1.07 ಕೋಟಿ, ಆವರಗೊಳ್ಳ 39.92 ಲಕ್ಷ, ಕಕ್ಕರಗೊಳ್ಳ 74.16 ಲಕ್ಷ, ಬೆಳವನೂರು 71.41 ಲಕ್ಷ, ಹೊನ್ನೂರು 1.14 ಕೋಟಿ, ಐಗೂರು 70.64 ಲಕ್ಷ, ತೋಳಹುಣಸೆ 2.98 ಲಕ್ಷ, ಶಿರಮಗೊಂಡನಹಳ್ಳಿ 14.78 ಲಕ್ಷ, ಮುದಹದಡಿ 96.17 ಲಕ್ಷ, ಹದಡಿ 80.27 ಲಕ್ಷ, ಕೈದಾಳ 64.25 ಲಕ್ಷ, ಕನಗೊಂಡನಹಳ್ಳಿ 51.78 ಲಕ್ಷ, ಕುಕ್ಕವಾಡ 9.24 ಲಕ್ಷ, ಲೋಕಿಕೆರೆ 4.55 ಲಕ್ಷ, ಮತ್ತಿ 50.57 ಲಕ್ಷ, ಶ್ಯಾಗಲೆ 49.83 ಲಕ್ಷ, ವಿದ್ಯುತ್ ಬಾಕಿ ಸೇರಿದಂತೆ ಒಟ್ಟು 19 ಗ್ರಾಮ ಪಂಚಾಯತಿ ರೂ. 10.30 ಕೋಟಿ ವಿದ್ಯುತ್ ಶುಲ್ಕದ ಬಾಕಿ ಇದೆ ಎಂದು ದಾವಣಗೆರೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!