ಜಾನಪದ ಲೋಕ ಪ್ರಶಸ್ತಿಗೆ ಭಜನೆ ಹಾಡುಗಾರರಾಗಿ ‘ವೈ. ನಿಂಗಪ್ಪ” ರಿಗೆ ಪ್ರಶಸ್ತಿ

'ವೈ. ನಿಂಗಪ್ಪ" ರಿಗೆ ಪ್ರಶಸ್ತಿ

ವಿಜಯನಗರ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದ ಶ್ರೀ ವೈ. ನಿಂಗಪ್ಪ (ನಿಂಗಜ್ಜ) ಇವರು ಜಾನಪದ ಲೋಕ ಪ್ರಶಸ್ತಿಗೆ ಭಜನೆ ಹಾಡುಗಾರರಾಗಿ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು. ಬುಡಕಟ್ಟು ಜಾನಪದ ಲೋಕೋತ್ಸವ-2023 ಭಜನಾ ಹಾಡುಗಳು ಜಾನಪದ ಲೋಕೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ,.

ಮುಮ್ಮೇಳ, ಹಿಮ್ಮೇಳ ಕೂಡಿಯೇ ಇರುವುದರಿಂದ ಹಾಡುಗಾರಿಕೆ ಸೊಗಸು ಪಡೆದುಕೊಳ್ಳುತ್ತದೆ. ಹಿಮ್ಮೇಳಕ್ಕಿಂತ ಮುಮ್ಮೇಳ ಹಾಡುಗಾರರಿಗೆ ಪ್ರಾಧಾನ್ಯತೆ ಹೆಚ್ಚು. ಒಂದೊಂದು ಸಲ ಹಿಮ್ಮೇಳದವರೇ ಮುಮ್ಮೇಳದ ಹಾಡುಗಾರರಾಗಿರುತ್ತಾರೆ.

ಹೀಗೆ ಹಿನ್ನೆಲೆಯ ಧ್ವನಿಗಾರನೆಂದೇ ಗುರುತಿಸಿಕೊಂಡಿರುವರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಬಸರಕೋಡು ಗ್ರಾಮದ ಹಾಡಿನ ಜೋಡಿದಾರ ಎಂದೇ ಹೆಸರು ಪಡೆದಿರುವ ವೈ. ನಿಂಗಪ್ಪ.
ಎಪ್ಪತ್ತು ತುಂಬಿದ ಹರೆಯದಲ್ಲೂ ತತ್ವಪದ, ಭಜನೆ, ಜನಪದ ಗೀತೆಗಳನ್ನು ಹಾಡುತ್ತಾರೆ. ಪರಂಪರೆಯಿಂದ ಕಲಿತದ್ದು ಏನೂ ಇಲ್ಲದಿದ್ದರ ಆಸಕ್ತಿಯಿಂದ
ಹಾಡುಗಾರಿಕೆಯನ್ನು ರೂಡಿಸಿಕೊಂಡಿದ್ದಾರೆ. ನಿಂಗಜ್ಜನ ಹಾಡುಗಾರಿಕೆ ಕೇವಲ ಭಜನಾ ಸಂಗೀತಕ್ಕೆ ಮಾತ್ರ ಸೀಮಿತವಾಗದೆ ಬಯಲಾಟದ ಹಾಡುಗಳನ್ನು ಹಾಡುತ್ತಾರೆ.

ಬಸರಕೋಡಿನ ಭಜನಾ ಸಂಘದ ಮೂರು ಬಾರಿ ಹಂಪಿ ಕ್ಷೇತ್ರಕ್ಕೆ ಕಾಲ್ನಡಿಗೆಯಿಂದಲೇ ಭಜನೆಯೊಂದಿಗೆ ವಿರೂಪಾಕ್ಷೇಶ್ವರನ ಸನ್ನಿದಿಗೆ ತಲುಪಿ ತಮ್ಮ ಭಕ್ತಿಯ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಜಾನಪದ ಲೋಕೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು

Leave a Reply

Your email address will not be published. Required fields are marked *

error: Content is protected !!