ಭಾರತೀಯ ಜನತಾ ಪಾರ್ಟಿ, ದಾವಣಗೆರೆ ಜಿಲ್ಲೆ, ಬಜೆಟ್ 2024-25 : ಜಿಲ್ಲಾ ಬಿಜೆಪಿ ಸ್ವಾಗತ

ವಿತ್ತೀಯ ಶಿಸ್ತಿನ ಅನುಪಾಲನೆಯ, ಚುನಾವಣಾ ಪೂರ್ವದಲ್ಲಿ ಯಾವುದೇ ಜನಪ್ರಿಯತೆಗೆ ಶರಣಾಗದಿರುವ, ಕಳೆದ ದಶಕದ “ಫಸ್ಟ್ ಡೆವೆಲಪ್ ಇಂಡಿಯಾ(FDI)” ಸಿದ್ಧಾಂತವನ್ನು ಮುಂದುವರಿಸುವ ಹಾಗು ಮುಂದೆ ಅಧಿಕಾರ ವಹಿಸಿ ಪೂರ್ಣಕಾಲೀನ ಮಂಡಿಸುವ ಆತ್ಮ ವಿಶ್ವಾಸದ ಈ ಮಧ್ಯಂತರ ಬಜೆಟ್ ಈ ಸರಕಾರದ ಆತ್ಮ ನಿರ್ಭರತೆಯನ್ನು ಪ್ರತಿಬಿಂಬಿಸಿದೆ.
ಯಾವುದೇ ಹೊಸತೆರಿಗೆಗಳ ಪ್ರಸ್ತಾಪವಿಲ್ಲದಿರುವ, ಯಾರ ಕಿಸೆಗೂ ಭಾರವಾಗದಿರುವ, ಜ್ಯಾರಿಯಲ್ಲಿರುವ ಆರ್ಥಿಕ ಪುನಶ್ಚೇತನ ಕಾರ್ಯಕ್ರಮಗಳ ಮುಂದುವರಿಕೆಯ ಆಶ್ವಾಸನೆ ನೀಡಿ ಜನರಿಗೆ ವಿಶ್ವಾಸ ನೀಡುವ ಬಜೆಟ್.
“ದೇಶ ಮೊದಲು” ಎನ್ನುವ ಅಭಿವೃದ್ಧಿಯ ಚಿಂತನೆಯನ್ನು ಮುಂದುವರಿಸಿರುವ ವಿತ್ತೀಯ ಪರಿಪಕ್ವತೆಗೆ ಮತ್ತು ವೃತ್ತಿ ಪರತೆಗೆ ಸಾಕ್ಷಿಯಾಗಿರುವ ಬಜೆಟ್.
ಚುನಾವಣಾ ಪೂರ್ವದಲ್ಲಿ ಜನಪ್ರಿಯತೆಗೆ ಶರಣಾಗದಿರುವ ಈ ಮಧ್ಯಂತರ ಬಜೆಟ್ ‘ಭಾ ಜ ಪ’ ನೇತೃತ್ವದ ಈ ಸರ್ಕಾರದ ಆತ್ಮ ವಿಶ್ವಾಸವನ್ನು ವ್ಯಕ್ತ ಪಡಿಸಿದೆ.
ರೈಲ್ವೇಸ್ ಮತ್ತು ಕೃಷಿಗೆ ಆದ್ಯತೆ, ಯುವಕರು, ನಾರಿ ಶಕ್ತಿ, ಕೃಷಿಕರು ಮತ್ತು ಬಡಜನರನ್ನು ಕೇಂದ್ರವಾಗಿ ಇರಿಸಿರುವ ಈ ಬಜೆಟ್ನ ಸಂದೇಶ ಸ್ವಾಗತಾರ್ಹ.
ಈ ಸರಕಾರದ ಅಭಿವೃದ್ಧಿಯ ನಾಗಲೋಟವನ್ನು ಮುಂದುವರಿಸುತ್ತಾ ಜಾಗತಿಕ ಆರ್ಥಿಕ ಪ್ರಗತಿಯ ಇಂಜಿನ್ ಆಗಿ ಮುಂದುವರೆಯುವ ವಿಶ್ವಾಸದ ಬಜೆಟ್.
ಎಲ್ಲರನ್ನೂ ಒಳಗೊಂಡಿರುವ, ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ “ಒಳ್ಳೆಯ ವೃತ್ತಿಪರ ಆಡಳಿತದ ಮಾದರಿ”ಯನ್ನು ಪರಿಚಯಿಸುವ ಬಜೆಟ್.
“ಗರಿಬ್ ಕಲ್ಯಾಣವೇ ದೇಶದ ಕಲ್ಯಾಣ” ಎನ್ನುವ ಈ ಸರಕಾರದ “ಸಬ್ ಕಾ ಸಾತ್, ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಸಿದ್ಧಾಂತವನ್ನು ಈ ಬಜೆಟ್ ಪ್ರತಿಬಿಂಬಿಸಿದೆ.
ಚುನಾವಣೆಯ ಈ ಸಮಯದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಹೊಸ ತಂತ್ರಜ್ಞಾನ ಕೈಗಾರಿಕೆಗಳಿಗೆ ಮತ್ತು ಯುವಕರಿಗೆ ಆದ್ಯತೆ ನೀಡಿರುವ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾಗಿರುವ ಈ ಮಧ್ಯಂತರ ಬಜೆಟ್ ನ್ನು ತುಂಬ ಹೃದಯದಿಂದ ಸ್ವಾಗತಿಸುತ್ತೇನೆ.
“ಈ ಮಧ್ಯಕಾಲೀನ ಬಜೆಟ್ ಕೇವಲ ಒಂದು ಕಿರುನೋಟ. ಪೂರ್ಣ ಪ್ರಮಾಣದ ಬಜೆಟ್ ಇನ್ನೂ ಬಾಕಿ ಇದೆ.”
ತಮ್ಮ ವಿಶ್ವಾಸಿ,
ಡಿ.ಎಸ್. ಶಿವಶಂಕರ್
ಜಿಲ್ಲಾ ಬಿಜೆಪಿ ವಕ್ತಾರರು.