ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನೂತನ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಧ್ಯಾಮೇನೆಹಳ್ಳಿ ಶೇಖರಪ್ಪ ನವರಿಗೆ ಹೃದಯ ಸ್ಪರ್ಶಿ ಸನ್ಮಾನ

ಕೃಷಿ ಪತ್ತಿನ ಸಹಕಾರಿ ಸಂಘ

ದಾವಣಗೆರೆ ಪೆ ೨ (ಮಳಲ್ಕೆರೆ)
ಇತ್ತೀಚೆಗೆ ನಡೆದ ಜಿಲ್ಲಾ ಸಹಕಾರ ಯೂನಿಯನ್ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಸರ್ವಾನುಮತದಿಂದ ಎರಡನೇ ಬಾರಿಗೆ ಜನಪ್ರಿಯ ಧ್ಯಾಮೇನೆಹಳ್ಳಿ ಶೇಖರಪ್ಪ ನವರು ಆಯ್ಕೆಯಾದ ಹಿನ್ನೆಲೆಯಲ್ಲಿ ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಅವರನ್ನು ಹೃದಯ ಸ್ಪರ್ಶಿ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಮಳಲ್ಕೆರೆ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಧ್ಯಾಮೇನೆಹಳ್ಳಿ ಶೇಖರಪ್ಪ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಹಕಾರಿ ಸಂಘಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ರೈತರಿಗೆ ಸಾಲಸೌಲಭ್ಯ, ಹೆಚ್ಚುವರಿ ಸಾಲ
ತೋಟಗಳ ಅಭಿವೃದ್ಧಿ ಸಾಲಗಳ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ, ಹೈನುಗಾರಿಕೆ, ಕುರಿಸಾಕಣೆ, ಯಂತ್ರೋಪಕರಣಗಳ ಬಳಕೆ
ನೆರವು ನೀಡಲು ಸಹಕರಿಸುವೆ,ಸಂಘದ ಷೇರು ಧಾರರು ಸಹ ಅಷ್ಟೇ ತೃಪ್ತಿ ದಾಯಕ ಸಾಲತಿರುವಳಿ ಮಾಡಿ
ಸಹಕಾರಿ ತತ್ವದ ಉದ್ದೇಶಗಳು
ಈಡೇರಿಕೆಗೆ ತಾವು ಸಹಕರಿಸಿ
ಇಡೀ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹ ನಿಮ್ಮ ಜೊತೆ
ಇರುತ್ತದೆ ಎಂದು ಭರವಸೆ ತುಂಬಿದರು.
ಈ ಸಂದರ್ಭದಲ್ಲಿ ಹಿರಿಯ ಮಾಧ್ಯಮ ರತ್ನ ಪ್ರಶಸ್ತಿ ವಿಜೇತ ವರದಿಗಾರ ಪುರಂದರ್ ಲೋಕಿಕೆರೆ ತಾವು ಕೂಡ ಲೋಕಿಕೆರೆ ಸೊಸೈಟಿ ಅಧ್ಯಕ್ಷ ರಾಗಿ ಡಿ ಸಿ ಸಿ ಬ್ಯಾಂಕ್ ಜೊತೆ ಒಡನಾಟ ಹೊಂದಿ ರೈತ ಷೇರು ದಾರರಿಗೇ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಸಾಧನೆ ಮಾಡಿ ಸರಿಯಾದ ರೀತಿಯಲ್ಲಿ ಸೊಸೈಟಿ ಗಳು ಕೆಲಸ ಮಾಡಿದಲ್ಲಿ ಯಾವುದೇ ಸಹಕಾರಿ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ಯನ್ನು ಹರೀಶ್ ಕುಮಾರ್, ಎಸ್ ಎಂ ಮುರುಗೇಂದ್ಪಪ್ಪ, ಎನ್ ಓ ಮುರುಗೇಶ್, ಹೆಚ್ ಎಸ್ ರುಧ್ರೇಶ್,ಬಾಡದ ಸೊಸೈಟಿ ರುದ್ರೇಶ್, ಎಸ್ ಎಂ ಗೌಡ, ಗೀತಾ ಷಣ್ಮುಖಪ್ಪ ನಾಗನಗೌಡ ಸೊಸೈಟಿ ನಿರ್ದೇಶಕ ವೆಂಕಟೇಶ್ ಪ್ರಭಾವತಿ ಸೊಸೈಟಿ ಕಾರ್ಯನಿರ್ವಾಹಕ ಅಧಿಕಾರಿ ಎಂ ಕೆ ಮೋಹನ್ ಕುಮಾರ್ ಪ್ರಭಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್, ಉಮಾಪತಿ ಸದಾನಂದ್ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು
ಆರಂಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎಂ ಕೆ ಮೋಹನ್ ಕುಮಾರ್ ಸ್ವಾಗತಿಸಿ, ಸದಾನಂದ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!