Flipkart Big Deal sale – ವರ್ಷದ ಕೊನೆಗೆ ಭರ್ಜರಿ ಗೀಫ್ಟ್ : ಐಫೋನ್ ಇದೀಗ ಅತೀ ಕಡಿಮೆ ಬೆಲೆಗೆ

big-discounts-on-apple-iphone-12-to-iphone-15-offers-check-price

ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. 2023 ರ ಅಂತ್ಯದ ಮೊದಲು, ಪ್ರಸಿದ್ಧ ಇ ಕಾಮರ್ಸ್ ತಾಣ ಬಿಗ್ ಇಯರ್ ಎಂಡ್ ಸೇಲ್ ಅನ್ನು ಪ್ರಾರಂಭಿಸಿದೆ. ಹೊಸ ವರ್ಷದ ಮೊದಲು ನೀವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ವಸ್ತುಗಳನ್ನು ಖರೀದಿಸಿದರೆ ಉತ್ತಮ ರಿಯಾಯಿತಿಗಳನ್ನು ಪಡೆಯುತ್ತೀರಿ. ಜೊತೆಗೆ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್​ಫೋನ್ ಎಂಬಂತೆ ಹೊಸ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಅದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಫ್ಲಿಪ್​ಕಾರ್ಟ್ ಮಾರಾಟವು ಡಿಸೆಂಬರ್ 9 ರಿಂದ ಪ್ರಾರಂಭವಾಗಿದ್ದು, ಆ್ಯಪಲ್ ಸ್ಮಾರ್ಟ್‌ಫೋನ್‌ಗಳ ಮೇಲೆ ಹಲವಾರು ಸಾವಿರ ರೂಪಾಯಿಗಳ ರಿಯಾಯಿತಿ ಇದೆ.

ಐಫೋನ್ 12 ರಿಂದ ಐಫೋನ್ 15 ಸರಣಿಯ ಮಾದರಿಗಳ ಮೇಲೆ ಫ್ಲಿಪ್​ಕಾರ್ಟ್ ಬಿಗ್ ಇಯರ್ ಎಂಡ್ ಸೇಲ್​ನಲ್ಲಿ ಉತ್ತಮ ಕೊಡುಗೆಗಳು ಲಭ್ಯವಿವೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ HDFC ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಬ್ಯಾಂಕ್‌ಗಳಿಂದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10 ಪ್ರತಿಶತದವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ನೀವು ಫ್ಲಿಪ್‌ಕಾರ್ಟ್‌ನಿಂದ ಐಫೋನ್ 12 ಅನ್ನು ಖರೀದಿಸಿದರೆ 7,901 ರೂ. ಗಳ ರಿಯಾಯಿತಿ ಇದೆ. ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ (128GB) 49,900 ರೂ. ಆದರೆ ನೀವು ಇದನ್ನು ಕೇವಲ 41,999 ರೂ. ಗಳಲ್ಲಿ ಖರೀದಿಸಬಹುದು.

ಐಫೋನ್ 13 128GB ಮಾದರಿಗೆ ನೇರ ಬೆಲೆ ಕಡಿತವಿಲ್ಲ. ಆದರೆ ಬ್ಯಾಂಕ್ ಕೊಡುಗೆಗಳನ್ನು ಘೋಷಿಸಲಾಗಿದೆ. ಫ್ಲಿಪ್‌ಕಾರ್ಟ್ ಎಲ್ಲ ಕೊಡುಗೆಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾದರೆ, 59,900 ರೂ. ಗಿಂತ ಕಡಿಮೆ ಬೆಲೆಗೆ ಐಫೋನ್ 13 ಅನ್ನು ಖರೀದಿಸಬಹುದು. ಐಫೋನ್ 14 (128GB) ಅನ್ನು 54,999 ರೂಪಾಯಿಗೆ ಖರೀದಿಸಬಹುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ರೂ. 10,901 ರ ರಿಯಾಯಿತಿಯ ನಂತರ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಐಫೋನ್ 14 ಮಾದರಿಯ ಬೆಲೆ ರೂ 58,999 ಆಗಿದೆ.

ಇನ್ನು ಈ ವರ್ಷ ಬಿಡುಗಡೆಯಾದ ಐಫೋನ್ 15 (128GB) ನಲ್ಲಿ ಉತ್ತಮ ಕೊಡುಗೆಯೂ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 79,900 ರೂ. ಬದಲಿಗೆ 76,990 ರೂ. ಗಳಿಗೆ ಖರೀದಿಸಬಹುದು. ನೀವು 2,910 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಇದರ ಜೊತೆಗೆ ಅನೇಕ ಬ್ಯಾಂಕ್ ಕೊಡುಗೆಗಳಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!