ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಸುಳ್ಳು, ವಾಮ, ಮಾರ್ಗದಿಂದ.! ಸಿಎಂ ಗೆ ಬಸವರಾಜು ವಿ ಶಿವಗಂಗಾ ತಿರುಗೇಟು

ಚನ್ನಗಿರಿ : ಕಾಂಗ್ರೆಸ್ ನಿಂದ 200 ಯೂನಿಟ್ ವಿದ್ಯುತ್ ಉಚಿತ ಘೋಷಣೆ ಸುಳ್ಳು ಭರವಸೆ ಎಂದು ಹೇಳಿದ ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಸುಳ್ಳು ಹೇಳುವುದು ಬಿಜೆಪಿಗೆ ರಕ್ತದಲ್ಲೇ ಬಂದಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಾಲ್ಲೂಕಿನ ಬೆಳ್ಳಿಗನೂಡು ಗ್ರಾಮದಲ್ಲಿ ರೈತ ರವಿ ಕುಮಾರ್ ರವರ ನೂತನ ಟ್ರ್ಯಾಕ್ಟರ್ ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ  ಅಧಿಕಾರ ಮಾಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯನವರು ಕೊಟ್ಟ ಎಲ್ಲಾ ಭರವಸೆಗಳನ್ನ ಈಡೇರಿಸಿದ್ದಾರೆ, ನಮ್ಮ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡಿದಂತೆ 200 ಯೂನಿಟ್ ವಿದ್ಯುತ್ ಉಚಿತವಾಗಿಯೇ ನೀಡುತ್ತೇವೆ ನುಡಿದಂತೆ ನಡೆಯುವುದು ಕಾಂಗ್ರೆಸ್ ಧರ್ಮ ಎಂದರು. ದಾವಣಗೆರೆಯಲ್ಲಿ ಸಿಎಂ ಬಸವರಾಜು ಬೊಮ್ಮಾಯಿ ಅವರು ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಇಂತ ಹತ್ತು ಸುಳ್ಳು ಭರವಸೆಗಳು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಿಂದ ಬರುತ್ತವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ ಬಿಜೆಪಿ ಪಕ್ಷ ರಾಜ್ಯದಲ್ಲಿ ಎಂದೂ ಬಹುಮತ ಪಡೆದು ಅಧಿಕಾರ ನಡೆಸಿಲ್ಲ, ಅಪರೇಷನ್ ಕಮಲ ನಡೆಸಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರ ಅಲೆ ಇದ್ದಾಗಲೂ ವಾಮವಾರ್ಗ ಹಾಗೂ ಸುಳ್ಳು ಹೇಳಿಯೇ ಅಧಿಕಾರ ಮಾಡುತ್ತಿರುವುದು ಇಂದು ನೀವು 17 ಜನರ ಅಪರೇಷನ್ ಕಮಲದೊಂದಿಗೆಯೇ ಅಧಿಕಾರ ಮಾಡುತ್ತಿರುವುದು ಎಂದು ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಸಮಾಜ ಮುಖಂಡರು ಸಚಿವರಾದ ಶ್ರೀರಾಮುಲು ಅವರನ್ನ ಉಪ ಮುಖ್ಯಮಂತ್ರಿ ಮಾಡುತ್ತೇವೆ ಎಂದು ರಾಜ್ಯದ ದೊಡ್ಡ ಸಮಾಜವಾದ ವಾಲ್ಮೀಕಿ ಸಮಾಜಕ್ಕೆ ದ್ರೋಹ ಮಾಡಿ ದ್ದೀರಾ, ಅಧಿಕಾರಕ್ಕಾಗಿ ಎಂಥ ಸುಳ್ಳನ್ನು ಸಹ ಜನರಿಗೆ ಹೇಳುವುದು ಬಿಜೆಪಿ ಪಕ್ಷ ಎಂದರು. ಅಧಿಕಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಷ್ಟು ಸುಳ್ಳು ಹೇಳಿದ್ದಾರೆ ಎಂಬುದಕ್ಕೆ ಲೆಕ್ಕಾವೇ ಇಲ್ಲ ಈ ಹಿಂದಿನ ಚುನಾವಣೆಗಳ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು  ಜನರಿಗೆ ಯಾವ ಯಾವ ಭರವಸೆ ಕೊಟ್ಟಿದ್ದರು ಎಷ್ಟು ಈಡೇರಿಸಿದ್ದಾರೆ ಎಂಬುದನ್ನ ತಿರುಗಿ ನೋಡಿದರೆ ಮುಖ್ಯಮಂತ್ರಿಗಳಿಗೆ ಸುಳ್ಳು ಯಾರು ಹೇಳಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಬಸವರಾಜು ವಿ ಶಿವಗಂಗಾ ಟಾಂಗ್ ನೀಡಿದ್ದಾರೆ. ಸೋಲಿನ ಭಯದಿಂದ ಸಿಎಂ ಬಸವರಾಜು ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ಮಾಡುತ್ತಿದ್ದಾರೆ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನ ಯಾರು ತಡೆಯಲು ಸಾಧ್ಯವಿಲ್ಲ, ಏಕೆಂದರೆ ಬಿಜೆಪಿ ಪ್ರತಿ ಚುನಾವಣೆಯಲ್ಲೂ ಹೇಳುವಂತ ಸುಳ್ಳು ಭರವಸೆಗಳನ್ನ ಜನರು ಕೇಳುವುದಿಲ್ಲ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ಜನ ಸಾಮಾನ್ಯರು ಬದುಕದಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಇಂದು ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಇದಕ್ಕೆ ಜನರೇ 2023 ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಬಸವರಾಜು ವಿ ಶಿವಗಂಗಾ ಅವರು ಪ್ರತಿಕ್ರಿಯೆ ನೀಡಿದರು. ಅಲ್ಲದೇ ಕೇವಲ ವಿದ್ಯುತ್ ಮಾತ್ರ ಉಚಿತವಲ್ಲ ಇಂಥ ಹತ್ತಾರು ಜನರ ಯೋಜನೆಗಳನ್ನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರು ಹಾಗೂ ಪಕ್ಷದ ಹಿರಿಯ ಮತ್ತು ಯುವ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!