ಜಿಂಕೆ ಕೊಂಬು ಮಾರಾಟ.! ವ್ಯಕ್ತಿಯ ಬಂಧನ
ದಾವಣಗೆರೆ: ಪರವಾನಗಿ ಇಲ್ಲದೆ ಜಿಂಕೆ ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಂಜುನಾಥ ಶೆಟ್ಪಪ್ ಭೋವಿ ಎಂಬ ವ್ಯಕ್ತಿಯನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು, ಜಿಂಕೆ ಕೊಂಬು ವಶ ಪಡಿಸಿಕೊಂಡಿದ್ದಾರೆ.
ಶಿರಸಿ ತಾಲ್ಲೂಕು ಮುಂಡ ಗೋಡು ಮಳಲಿ ಗ್ರಾಮದ ಮಂಜುನಾಥ್, ಚನ್ನಗಿರಿ ಟೌನ್‌ನ ಮಾರುತಿ ಸರ್ಕಲ್ ಬಳಿ ಕಳೆದ ಮಾ.8ರಂದು ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ್ದರು. ಮಂಜುನಾಥನನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ತಪ್ಪಿಸಿಕೊಂಡಿದ್ದಾರೆ.
ಪಿಎಸ್‌ಐ ಮೇಘರಾಜ ಎಂ.ವಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಟಿ.ಸಿ ಪ್ರಕಾಶ್, ರವಿಕುಮಾರ್, ರಾಘವೇಂದ್ರ, ಶಿವಲಿಂಗ್, ರಿಜ್ಯಾನ್ ಗುಬ್ಬಿ ದಾಳಿ ವೇಳೆ ಭಾಗವಹಿಸಿದ್ದರು.