ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಬ್ಲಾಕ್ ಫಂಗಸ್ ರೋಗಿಗೆ ಚಿಕಿತ್ಸೆ – ಡಾ. ಗೌರಮ್ಮ

ಚಿತ್ರದುರ್ಗ:  ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ  ಬ್ಲಾಕ್  ಫಂಗಸ್ ಕೇಸ್ ಪತ್ತೆಯಾಗಿದೆ. ಸಾಮಾನ್ಯವಾಗಿ ಈ ಬ್ಲಾಕ್  ಫಂಗಸ್ ಮೇಲಿನ ದವಡೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೇವಲ ಮೂರು ಪರ್ಸೆಂಟ್ ರೋಗಿಗಳಲ್ಲಿ ಮಾತ್ರ ಕೆಳದವಡೆಯಲ್ಲಿ ಈ ರೋಗಲಕ್ಷಣಗಳು ಕಂಡುಬರುತ್ತದೆ ಎಂದು ಹಲ್ಲುನೋವಿನಿಂದ ಬಳಲುತ್ತಿದ್ದ ರೋಗಿಯನ್ನು ತಪಾಸಣೆ ಮಾಡಿದ ಮುಖದವಡೆ ಮತ್ತು ಬಾಯಿ ಶಸ್ತ್ರ

ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ನಾಗರಾಜಪ್ಪ, ಡಾ. ತನ್ವೀರ್ ಅಹಮದ್ ಮತ್ತು ಡಾ. ಮದುಮತಿ ಇದು ಬ್ಲಾಕ್ ಫಂಗಸ್ ಕೇಸ್ ಎಂದು ಪತ್ತೆ ಹಚ್ಚಿದ್ದಾರೆ. ಕೆಳದವಡೆಯಲ್ಲಿ ಕಾಣಿಸಿಕೊಂಡ ಈ ಕೇಸ್ ಚಿತ್ರದುರ್ಗದಲ್ಲಿ ಮೊದಲಬಾರಿ ಹೇಳಲಾಗಿದೆ. ಈ ರೋಗಿಗೆ ಈ ವೈದ್ಯರ ತಂಡವು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೌರಮ್ಮ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!