drinking water; ಕುಡಿಯುವ ನೀರಿನ ಪರೀಕ್ಷೆ ಯಶಸ್ವಿ; ಜನರಲ್ಲಿದ್ದ ಆತಂಕ ದೂರ

ದಾವಣಗೆರೆ, ಅ.06: ಲೋಕಿಕೆರೆ ಗ್ರಾಮದ ಪಂಚಾಯತ್ ಯಲ್ಲಿ ಗ್ರಾಮದ ಎಲ್ಲಾ ವಾರ್ಡ್ ಗಳಲ್ಲಿಯೂ ಕುಡಿಯುವ ನೀರು (drinking water) ಶುದ್ಧವೇ ಅಶುದ್ಧವೇ ಎಂದು ಜಿಲ್ಲಾ ಪಂಚಾಯತ್ ನೀರು ಪರೀಕ್ಷಾ ತಜ್ಞ ಆರಿಫ್ ವುಲ್ ರವರು ಗ್ರಾಮದ ಜನರು ಈಗಾಗಲೇ ಕುಡಿಯಲು ಬಳಸುತ್ತಿದ್ದ ನೀರನ್ನು ಪ್ರಾಯೋಗಿಕ ಪರೀಕ್ಷೆಗೊಳಪಡಿಸಿ ಪ್ರತ್ಯಕ್ಷವಾಗಿ ತೋರಿಸಿ ಜನರಲ್ಲಿದ್ದ ಆತಂಕ ದೂರ ಮಾಡಿದರು.

ಶುದ್ಧ ನೀರು ಪಿಚ್ -6.0-6.5ರವರೆಗೆ ಇದ್ದರೆ ಗಡಸು ನೀರು, 200-400ರವರೆಗೆ ಇದ್ದರೇ ಫ್ಲೋರೈಡ್ ಅಂಶ, 200ರೊಳಗೆ ಇದ್ದರೆ ಯಾವುದೇ ಹಾನಿಕಾರಕ ಅಲ್ಲ ಎಂದು ಸರಳ ವಿಧಾನದ ಮೂಲಕ ತೋರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

Lingayat; ವೀರಶೈವ-ಲಿಂಗಾಯತ ಮಹಾ ಅಧಿವೇಶನಕ್ಕೆ ಡೇಟ್ ಫಿಕ್ಸ್

ಈ ಹಿಂದೆ ಗ್ರಾಮದಲ್ಲಿ ಕುಡಿಯಲು ನೀರು ಯೋಗ್ಯವಲ್ಲ, ಕೊಳಕು ನೀರು ನಲ್ಲಿಯಲ್ಲಿ ಬರುತ್ತಾ ಇದೆ ಎಂದು ಪಂಚಾಯತ್ ಗೆ ಪದೆ ಪದೇ ಅಹವಾಲು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶ್ವಿನಿಯವರು ಜಿಲ್ಲಾ ಪಂಚಾಯತ್ ಪಿಆರ್ಇ ವಿಭಾಗಕ್ಕೆ ಪತ್ರ ಬರೆದು ನೀರು ಪರರೀಕ್ಷೆ ಮಾಡಿ ಶುದ್ಧವೇ ಅಶುದ್ಧವೇ ಎಂದು ವರದಿ ನೀಡುವಂತೆ ಮನವಿ ಮಾಡಿದ್ದರು. ಈ ಮೇರೆಗೆ ಗ್ರಾಮದಲ್ಲಿ ಎಲ್ಲಾ ವಾರ್ಡ್ ಗಳ ಕುಡಿಯುವ ನೀರು, ಬೋರ್ ವೆಲ್, ಬಹುಗ್ರಾಮ ಕುಡಿಯುವ ನೀರು ಯೋಜನೆ ನೀರನ್ನು ಪರೀಕ್ಷೆ ನಡೆಸಿ ಕುಡಿಯಲು ನೀರು ಯೋಗ್ಯ ಎಂದು ವರದಿ ಹೇಳಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಅಶ್ವಿನಿ ಕಾರ್ಯದರ್ಶಿ ಸುರೇಶ್ ಬಿಲ್ ಕಲೆಕ್ಟರ್ ಶೇಖರಪ್ಪ, ಶುದ್ಧ ನೀರು ಘಟಕ ಉಸ್ತುವಾರಿ ಮಂಜುನಾಥ್, ನೀರು ಸರಬರಾಜು ನೀರು ಗಂಟಿ ಪರಮೇಶ್ವರಪ್ಪ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!