ವಿದ್ಯುತ್ ತಂತಿ ತಗುಲಿ ಗಾಯಗೊಂಡ ಬಾಲಕ
ದಾವಣಗೆರೆ, ಡಿಸೆಂಬರ್ 15: ವಿದ್ಯುತ್ ತಂತಿ ತಗುಲಿ ಬಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನ್ಯಾಮತಿ ತಾಲೂಕಿನ ಜೊಸಜೋಗಾ ಗ್ರಾಮದಲ್ಲಿ ನಡೆದಿದೆ. ದೀಪಕ್ ನಾಯಕ್ (11) ಗಾಯಗೊಂಡ ಬಾಲಕ. ಪ್ರಕರಣ ಸಂಬಂಧ ಬೇಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಳ್ಳದೇ ನ್ಯಾಮತಿ ಠಾಣೆ ಪೊಲೀಸರು ಸತಾಯಿಸುತ್ತಿರುವ ಆರೋಪ ಕೇಳಿಬಂದಿದೆ.
ದೀಪಕ್ ನಾಯಕ್ ಭಾನುವಾರ (ಡಿಸೆಂಬರ್ 3) ಆತನ ದೊಡ್ಡಪ್ಪನ ಜೊತೆ ಟ್ರಾಕ್ಟರ್ನಲ್ಲಿ ಜಮೀನಿಗೆ ಹೋಗಿದ್ದನು. ಈ ವೇಳೆ ಕಂಬದಿಂದ ತುಂಡಾಗಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದೆ. ಇದರಿಂದ ಗಾಯಗೊಂಡ ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮೀನಿನಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಹತ್ತಾರು ಸಲ ಮಾಹಿತಿ ನೀಡಿತ್ತು. ಆದರೂ ಕೂಡ ಅಧಿಕಾರಿಗಳು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವಂತೆ ಬಾಲಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.