ದಾವಣಗೆರೆಯಲ್ಲಿ ಬಿಎಸ್ ಯಡಿಯೂರಪ್ಪ ಮಹತ್ವದ ಪತ್ರಿಕಾಗೋಷ್ಠಿ: ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಆಗಮಿಸಿರುವ ಬಿಎಸ್ ಯಡಿಯೂರಪ್ಪ
ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ನಡೆದಿರುವ ಪತ್ರಿಕಾಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪನವರು ಕಾಂಗ್ರೆಸ್ ಎಸ್ ಸಿ ಎಸ್ಟಿ, ವಿರೋಧಿ ಎಂದು ಸಾಭಿತಾಗಿದೆ, ಕಾಂಗ್ರೆಸ್ ಡಾ.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ
ಬಿಜೆಪಿ ಡಾ ಅಂಬೇಡ್ಕರ್ ಅವರ ಸಮಾಧಿ ಜಾಗವನ್ನ ಅಭಿವೃದ್ಧಿ ಮಾಡಿದೆ, ಮನೆಯನ್ನು ಮ್ಯೂಸಿಯಂ ಆಗಿ ಅಭಿವೃದ್ಧಿ ಮಾಡಿದೆ .ಕಾಂಗ್ರೆಸ್ ಪಕ್ಷ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದೆ, ಚುನಾವಣೆಯಲ್ಲಿ ಅವರನ್ನ ಸೋಲಿಸಿ ಅನ್ಯಾಯ ಮಾಡಿಕೊಂಡು ಬಂದಿದೆ.
ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ದೊರಕಿದೆ, 28 ಕ್ಷೇತ್ರದಲ್ಲಿ ಗೆಲ್ಲುವ ಪ್ರಯತ್ನ ನಡೆಸಿದೆ.ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ .ನಾಮಿನೇಷನ್ ಸಂದರ್ಭದಲ್ಲಿ ಬರುವ ಅಪೆಕ್ಷೆವಿದೆ
ಕಾಂಗ್ರೆಸ್ ಸ್ನೇಹಿತರು ಬಹಳಷ್ಟು ಮಾತಾಡ್ತಾ ಇದ್ದಾರೆ ಚುನಾವಣೆ ನಂತರ ಅವರು ಎಲ್ಲಿ ಇರುತ್ತಾರೆ ಎಂದು ಗೊತ್ತಾಗುತ್ತದೆ, ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ತಿಳಿಸಲ,ಪ್ರಧಾನಿ ನರೇಂದ್ರ ಮೋದಿ ಮೂರನೇ ಭಾರಿ ಪ್ರದಾನಿ ಆಗ್ತಾರೆ
ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಲುಜೇನು ರೀತಿ ಒಂದಾಗಿರುತ್ತೆವೆ,ಯಾವುದೇ ಸಣ್ಣ ಪುಟ್ಟ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಉತ್ತಮ ಆಡಳಿತ ನಡೆಸತ್ತೆವೆ. ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಬರಗಾಲ ಇರುವ ಸಂದರ್ಭದಲ್ಲಿ ನೆರವಿಗೆ ಬರಲು ಕಾರ್ಯಕ್ರಮ ರೂಪಿಸುತ್ತಿದ್ದೆವೆ.ಬಿಜೆಪಿ ಜೆಡಿಎಸ್ ಒಂದಾಗಿ 28 ಕ್ಷೇತ್ರದಲ್ಲಿ ಗೆದ್ದು,ದೇವೇಗೌಡರು ನಮ್ಮ ಜೊತೆ ಇದ್ದಾರೆ, ಈ ಹೊಂದಾಣಿಕೆ ಮುಂದಿನ ಎಲ್ಲಾ ಚುನಾವಣೆಯಲ್ಲಿ ಇರುತ್ತೆವೆ, ಬಿಜೆಪಿಗೆ ಯಾವ ಗ್ಯಾರಂಟಿ ಎಫೆಕ್ಟ್ ಆಗುವುದಿಲ್ಲ, ಮೋದಿಯವರ ಗ್ಯಾರಂಟಿ ಸಾಕು ಎಂದರು.ಈಶ್ವರಪ್ಪನವರ ವಿರುದ್ದ ಕ್ರಮದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ,
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ರಾಜ್ಯದ ಜನರ ಅಪೇಕ್ಷೆ ಇದೆ ಎಂದರು.