chess; ಚದುರಂಗ’ದಿಂದ ಮಕ್ಕಳ ಬೌದ್ಧಿಕಮಟ್ಟ ಹೆಚ್ಚಾಗುತ್ತದೆ: ತೋಟಗಾರಿಕೆ ಸಹಾಯಕ ನಿರ್ದೇಶಕ ವಿಶ್ವೇಶ್ವರಯ್ಯ
ದಾವಣಗೆರೆ: ಚದುರಂಗ chess ಆಟದಿಂದ ಮಕ್ಕಳಲ್ಲಿನ ಕೌಶಲ್ಯತೆ ಗುರುತಿಸಬಹುದು, ಅಷ್ಟೇಅಲ್ಲಾ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬುದ್ದಿಮಟ್ಟ ಹೆಚ್ಚು ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಶ್ವೇಶ್ವರಯ್ಯ ತಿಳಿಸಿದರು.
ನಗರದ ಶ್ರೀಸೋಮೇಶ್ವರ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಶಾಲಾ `ಶ್ರೀಸೋಮೇಶ್ವರ ಚದುರಂಗಸಿರಿ’ ಚದುರಂಗ ಸ್ಪರ್ಧೆ ಉದ್ಘಾಟನೆ ಮಾಡಿ ಈ ವಿಷಯ ತಿಳಿಸಿದರು. ಚದುರಂಗ ಆಟವನ್ನು ನಾವು ನಿರ್ದಿಷ್ಟ ಸ್ಥಳದಲ್ಲಿಯೇ ಆಡಬೇಕೆಂದಿಲ್ಲ, ಮನೆಯಲ್ಲಿ ಆಟವಾಡಬಹುದು, ಯಾವುದೇ ಹೆಚ್ಚು ಖರ್ಚಿಲ್ಲದೆ ಆಡುವ ಆಟ ಎಂದರು. ಮಕ್ಕಳು ಮೊಬೈಲ್ ಬಳಸುವ ಬದಲು ಮನೆಯಲ್ಲಿ ಚದುರಂಗ ಆಡಿದರೆ ಅವರು ಮಾನಸಿಕವಾಗಿಯೂ ಸದೃಢರಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ ಅವರು ಚದುರಂಗ ಆಟದಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು, ಇದರಿಂದ ವಿದ್ಯಾರ್ಥಿಗಳಿಗೆ ಓದಲು ಹೆಚ್ಚು ಅನುಕೂಲವಾಗುತ್ತದೆ ಎಂದರು. ಕ್ರಮ, ನಿಯಮ, ಮುಂದಾಲೋಚನೆ, ತಾಳ್ಮೆ ಈ ನಾಲ್ಕು ಅಂಶಗಳು ಈ ಚದುರಂಗ ಆಟದಲ್ಲಿ ಅಡಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸೋಮಶೇಖರ್ ಬಿರಾದರ್ ಆಗಮಿಸಿದ್ದರು, ದೈಹಿಕ ಶಿಕ್ಷಕರಾದ ನಾಗರಾಜ್, ಇಂದ್ರಮ್ಮ, ರಾಹುಲ್ ಹಾಗೂ ಶರ್ಮಿಳಾ ಸ್ಪರ್ಧಾಳುಗಳಿಗೆ ಆಟದ ನಿಯಮ ಕುರಿತು ವಿವರಿಸಿ ಮಕ್ಕಳಿಗೆ ಸಲಹೆ ಸೂಚನೆ ನೀಡಿದರು. ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ನಿಶ್ಚಲ್ ಜಿ. ಎಸ್. ದ್ವಿತೀಯ ದಿಗಂತ ಎಂ.ಎಸ್. ತೃತೀಯ ದೀಕ್ಷಿತ್ ಪಿ ಎಂ ವಿಜೇತರಾದರೆ, ನಾಲ್ಕು ಸೌಮ್ಯ ಐದು ಸರ್ಮರ್ಥ್ ಶರ್ಮ ಆರನೇ ಸ್ಥಾನ ಸುಶ್ಚಿತ್ ಎ ಆಯ್ಕೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಪ್ರಥಮ ಆರಾಧ್ಯ ದೀಪಕ್ ದ್ವಿತೀಯ ಉಮೇಯಾವನ್ ಸಿಂಹ ತೃತೀಯ ರಮ್ಯಾ ಕೆ.ಎಸ್. ನಾಲ್ಕನೇ ಬಹುಮಾನಕ್ಕೆ ಶರತ್ ಕುಮಾರ್ ಎಂ ಎನ್ ಐದನೇ ಸ್ಥಾನಕ್ಕೆ ತೇಜಸ್ ಎಂಬಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯಶಿಕ್ಷಕರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ಮಾಲಾ ಹಾಗೂ ಪ್ರಕಾಶ್ ಸೇರಿದಂತೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.