ಲೋಕಲ್ ಸುದ್ದಿ

ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಆತ್ಮೀಯ ಸ್ವಾಗತ

ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಆತ್ಮೀಯ ಸ್ವಾಗತ

ದಾವಣಗೆರೆ: ಜಿಲ್ಲಾದ್ಯಾದ್ಯಂತ ಇಂದು ಸರ್ಕಾರಿ ಶಾಲೆಗಳು ಆರಂಭವಾದವು. ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.

ಪ್ರಥಮ ದಿನವಾದ ಇಂದು ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಕ್ಕಳೂ ಸಹ ಸಡಗರದಿಂದ ಆಗಮಿಸಿದ್ದರು.

ನಿಟ್ಟುವಳ್ಳಿ ಸರ್ಕಾರಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವನ್ನು ಹಬ್ಬದ ರೀತಿ ಆಚರಿಸಲಾಯಿತು.

ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂ, ಸಿಹಿ ನೀಡಿ ಆತ್ಮೀಯ ಸ್ವಾಗತ

ಮಕ್ಕಳಿಂದ ಶಾರದೆಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿಸಲಾಯಿತು. ನಂತರ ಅಕ್ಷರ ಅಭ್ಯಾಸ ಕಾರ್ಯಕ್ರಮವಾಯಿತು. ಮಕ್ಕಳಿಗೆ ಸಿಹಿ ವಿತರಿಸಿ, ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಿಸಿ ಹೂ ಕೊಟ್ಟು ಸ್ವಾಗತಿಸಲಾಯಿತು.

ಬಿಇಒ ದಾರುಕೇಶ್, ಮಹಾನಗರ ಪಾಲಿಕೆ ಸದಸ್ಯರಾದ ಸವಿತಾ ಹುಲ್ಮನಿ ಗಣೇಶ್, ಸಿಆರ್‌ಪಿ ಮಂಜಾನಾಯ್ಕ್, ಮುಖ್ಯ ಶಿಕ್ಷಕ ಎಂ. ಸುರೇಶ್, ಕೆ.ಟಿ ಜಯಪ್ಪ, ಕಮಲಮ್ಮ, ಸಿದ್ದಮ್ಮ, ಮಮತಾ ಎಸಯಿ, ರೇಷ್ಮಾ, ಭಾನುಮತಿ, ಸೇವಾದಳದ ಪರಮೇಶ್ವರಪ್ಪ, ಶಿವರುದ್ರಪ್ಪ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಚಂದ್ರಪ್ಪ ಇತರರು ಇದ್ದರು.

Click to comment

Leave a Reply

Your email address will not be published. Required fields are marked *

Most Popular

To Top