ಸಿನಿಮಾ

ದೋಹಾ ನಗರದಲ್ಲಿ  ‘ಚೌಕಬಾರ’ ಯಶಸ್ವಿ ಪ್ರದರ್ಶನ

ದೋಹಾ ನಗರದಲ್ಲಿ  ‘ಚೌಕಬಾರ’ ಯಶಸ್ವಿ ಪ್ರದರ್ಶನ

ಬೆಂಗಳೂರು:ಯುವ ಪ್ರತಿಭೆ ಈಗಾಗಲೇ ಕಿರುತೆರೆಯಲ್ಲಿ ಮನೆ ಮಾತಾದ ” ಪಾಪಾ. ಪಾಂಡು” ಖ್ಯಾತಿಯ ವಿಕ್ರಮ್ ಸೂರಿ ನಿರ್ದೇಶನದ “ಚೌಕಬಾರ” ದೋಹಾ ನಗರದಲ್ಲಿ  ಗುರುವಾರ (ಮೇ 25 ರಂದು ) ಯಶಸ್ವಿಯಾಗಿ  ಪ್ರದರ್ಶನ ಗೊಂಡು ಅಪಾರ ಜನಮನ್ನಣೆ ಗಳಿಸಿತು.

ಕತಾರ್ ಕನ್ನಡಿಗರು ಈ ಚಿತ್ರದ ನಿರ್ದೇಶಕರಾದ ವಿಕ್ರಮ್ ಸೂರಿ, ನಾಯಕ ನಟಿ ನಮಿತಾ ರಾವ್, ನಾಯಕ ನಟ ವಿಹಾನ್ ಹಾಗೂ ಚಿತ್ರದ ಸಂಗೀತ ನಿರ್ದೇಶಕರಾದಅಶ್ವಿನ್ ಕುಮಾರ್ ಅವರೊಟ್ಟಿಗೆ ಚಿತ್ರವನ್ನು ತುಂಬಿದ ಚಿತ್ರಮಂದಿರದಲ್ಲಿ ನೋಡಿ ಆನಂದಿಸಿದರು.

ಈ ಚಿತ್ರದ ಯಶಸ್ವಿ ಪ್ರಧರ್ಶನಕ್ಕೆ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಅವರ ತಂಡದವರ ಪರಿಶ್ರಮ ಶ್ಲಾಘನೀಯ. ಕತಾರ್ ನಲ್ಲಿ ಕನ್ನಡ ಚಿತ್ರಗಳ ಪ್ರಧರ್ಶನಗಳಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಇವರ ಕೊಡುಗೆ ಅಪಾರ. ಚಿತ್ರವನ್ನು ವೀಕ್ಷಿಸಿ ಆನಂದಿಸಿದ ಕನ್ನಡ ಕಲಾ ರಸಿಕರು ಚಿತ್ರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು ಮತ್ತು ಚಿತ್ರಕ್ಕೆ ಶುಭ ಹಾರೈಸಿದರು.

 

Click to comment

Leave a Reply

Your email address will not be published. Required fields are marked *

Most Popular

To Top