ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ಭರ್ಜರಿ ಹವಾ ಸೃಷ್ಟಿಸಿದೆ ಬೇರ ಸಿನಿಮಾದ ಟ್ರೈಲರ್

ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ಭರ್ಜರಿ ಹವಾ ಸೃಷ್ಟಿಸಿದೆ ಬೇರ ಸಿನಿಮಾದ ಟ್ರೈಲರ್

ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ವಿನು ಬಳಂಜ ನಿರ್ದೇಶನದ ಬೇರ ಸಿನಿಮಾದ ಟೀಸರ್ ನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರವರು ಬಿಡುಗಡೆಗೊಳಿಸಿದ್ದು ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಭಾರೀ ವೈರಲ್ ಆಗ್ತಾ ಇದೆ.

ಇದೀಗ ಬೇರ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ ಶುಭ ಆಶೀರ್ವಾದ ನೀಡಿ ಬಿಡುಗಡೆಗೊಳಿಸಿದ “ಬೇರ” ಸಿನಿಮಾದ ಟ್ರೈಲರ್ ಭರ್ಜರಿ ಹವಾ ಸೃಷ್ಟಿಸಿದೆ.

ವಿಭಿನ್ನ ಮತ್ತು ಸಖತ್ ಸ್ಟೋರಿಯನ್ನೂಳಗೊಂಡ ಬೇರ ಸಿನಿಮಾದ ಟ್ರೈಲರ್ ಇದೀಗ 5 ಲಕ್ಷಕ್ಕೂ ಅಧಿಕ ವೀಕ್ಷಣೆಯೊಂದಿಗೆ ಭಾರಿ ಸದ್ದು ಮಾಡುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವ ಬೇರ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಬಗ್ಗೆ ಸಿನಿ ಪ್ರಿಯರು ಈಗಾಗಲೇ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದೀಗ ಟ್ರೈಲರ್ ಎಲ್ಲಡೆ ಭಾರೀ ಸೌಂಡ್ ಮಾಡುತ್ತಿದ್ದು ಸಿನಿ ಪ್ರಿಯರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ರಾಜಶೇಖರ್ ರಮತ್ನಲ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ರಾಮ್ ದಾಸ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದತ್ತಣ್ಣ, ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಚಿತ್ಕಲ ಬಿರಾದರ್, ಮಂಜುನಾಥ್ ಹೆಗಡೆ, ಸ್ವರಾಜ್ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಶೈನ್ ಶೆಟ್ಟಿ, ಅಂಜಲಿ ಸುಧಾಕರ್, ಗುರು ಹೆಗಡೆ, ರಾಕೇಶ್ ಮಯ್ಯ, ದೀಪಕ್ ರೈ ಪಾಣಾಜೆ, ಧವಳ್ ದೀಪಕ್ ಇವರೆಲ್ಲರೂ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!